ತ್ರಿವಳಿ ಕೊಲೆ ಪ್ರಕರಣ, ಆರ್‌ಜೆಡಿ ಮುಖಂಡ ಶಹಾಬುದ್ದೀನ್ ದೋಷಮುಕ್ತ

1989 ರಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ನಾಯಕ ಮೊಹಮದ್ ಶಹಾಬುದ್ದೀನ್ ಅವರನ್ನು ಕೋರ್ಟ್ ದೋಷಮುಕ್ತಗೊಳಿಸಿದೆ.

ಫೆಬ್ರವರಿ 2, 1989 ರಲ್ಲಿ ಕಾಂಗ್ರೆಸ್ ಮುಖಂಡ ಪ್ರದೀಪ್‌ ಮಿಶ್ರಾ ಸೇರಿದಂತೆ ಮೂವರನ್ನು ಗುಂಡಿಟ್ಟು ಹತ್ಯೆ ಮಾಡಿದ ಆರೋಪ‌ ಶಹಾಬುದ್ದೀನ್ ಮೇಲಿತ್ತು. ಆದರೆ ಆರೋಪ ಸಾಬೀತುಪಡಿಸಲು ಸಾಕ್ಷಿ ಕೊರತೆ ಕಾರಣ ಕೋರ್ಟ್ ನಿರಪರಾಧಿ ಎಂದು ತೀರ್ಪು ನೀಡಿದೆ.