ಓಟಿಗೆ ನೋಟು : ಉಪಚುನಾವಣೆ ರದ್ದುಗೊಳಿಸಿ ಶಾಕ್ ನೀಡಿದ ಚುನಾವಣಾ ಆಯೋಗ – News Mirchi

ಓಟಿಗೆ ನೋಟು : ಉಪಚುನಾವಣೆ ರದ್ದುಗೊಳಿಸಿ ಶಾಕ್ ನೀಡಿದ ಚುನಾವಣಾ ಆಯೋಗ

ಚೆನ್ನೈ: ತಮಿಳುನಾಡಿನ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಬೇಕಿದ್ದ ಉಪಚುನಾವಣೆಯನ್ನು ಚುನಾವಣಾ ಆಯೋಗ ರದ್ದುಗೊಳಿಸಿ ಆಡಳಿತ ಪಕ್ಷ ಅಣ್ಣಾಡಿಎಂಕೆ ಪಕ್ಷಕ್ಕೆ ಶಾಕ್ ನೀಡಿದೆ. ಭಾನುವಾರ ರಾತ್ರಿಯವರೆಗೂ ಅಣ್ಣಾಡಿಎಂಕೆ ನಾಯಕರು ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ಪ್ರಚಾರ ನಡೆಸಿದರು. ಅಷ್ಟರಲ್ಲಿ ಚುನಾವಣಾ ಆಯೋಗ ಚುನಾವಣೆ ರದ್ದುಗೊಳಿಸಿ ಶಾಕ್ ನೀಡಿದೆ. ಉಪ ಚುನಾವಣೆಯನ್ನು ರದ್ದುಗೊಳಿಸಿ ಚುನಾವಣಾ ಆಯೋಗ ಐತಿಹಾಸಿಕ ತಪ್ಪು ಮಾಡಿದೆ ಎಂದು ಅಣ್ಣಾಡಿಎಂಕೆ ಅಭ್ಯರ್ಥಿ ದಿನಕರನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದ ಈ ಉಪಚುನಾವಣೆಗಾಗಿ ರೂ.89 ಕೋಟಿವರೆಗೂ ಮತದಾರರಿಗೆ ಶಶಿಕಲಾ ಬೆಂಬಲಿಗರು ಹಂಚಿದ್ದಾರೆಂಬ ಆರೋಪಗಳ ಹಿನ್ನೆಲೆಯಲ್ಲಿ ಭಾನುವಾರ ಮಹತ್ವದ ಸಭೆ ಸೇರಿದ ಚುನಾವಣಾ ಆಯೋಗ, ಉಪ ಚುನಾವಣೆಯನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡಿದೆ. ಜಯಲಲಿತ ನಿಧನದಿಂದ ತೆರವಾಗಿದ್ದ ಆರ್.ಕೆ.ನಗರ್ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 12ರಂದು ಉಪಚುನಾವಣೆ ನಡೆಯಬೇಕಿತ್ತು. ಆಡಳಿತ ಪಕ್ಷದ ನಾಯಕರು ಮತದಾರರ ಮೇಲೆ ಪ್ರಭಾವ ಬೀರಲು ಭಾರೀ ಪ್ರಮಾಣದಲ್ಲಿ ಹಣ ಹಂಚಿದ್ದಾರೆ. ಐಟಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಈ ಹಣ ಹಂಚಿಕೆ ರಹಸ್ಯ ಬಯಲಾಗಿದೆ. ಆರೋಗ್ಯ ಸಚಿವ ವಿಜಯ ಭಾಸ್ಕರ್, ನಟ ಶರತ್ ಕುಮಾರ್ ಮತ್ತಿತರರಿಗೆ ಸೇರಿದ ಹಲವು ಪ್ರದೇಶಗಳಲ್ಲಿ ದಾಳಿ ನಡೆದಿದ್ದು, ರೂ. 90 ಕೋಟಿವರೆಗೂ ಹಣ ಸರಬರಾಜಾಗಿರುವುದು ತಿಳಿದುಬಂದಿದೆ. ಹೀಗಾಗಿ ಬೆಳಕಿಗೆ ಬಾರದಂತೆ ಹಂಚಿಕೆಯಾದ ಹಣದ ಮೊತ್ತ ಇನ್ನೂ ಹೆಚ್ಚು ಇರಬಹುದು ಎಂದು ಐಟಿ ಇಲಾಖೆ ಅಭಿಪ್ರಾಯ.

Loading...