ಟೀ ಅಂಗಡಿ ಬಳಿಯ ಸಂಭಾಷಣೆಯಿಂದ ದೊಡ್ಡ ಕಿಡ್ನಿ ಮಾರಾಟ ದಂಧೆ ಬೆಳಕಿಗೆ – News Mirchi

ಟೀ ಅಂಗಡಿ ಬಳಿಯ ಸಂಭಾಷಣೆಯಿಂದ ದೊಡ್ಡ ಕಿಡ್ನಿ ಮಾರಾಟ ದಂಧೆ ಬೆಳಕಿಗೆ

ಸಣ್ಣ ಟೀ ಅಂಗಡಿ ಬಳಿ ನಡೆಯುತ್ತಿದ್ದ ಸಂಭಾಷಣೆಯು ಕಿಡ್ನಿ ದಂಧೆ ಬಯಲು ಮಾಡಲು ಪೊಲೀಸರಿಗೆ ಸಹಕಾರಿಯಾದ ಘಟನೆ ನಡೆದಿದೆ. ಡೆಹ್ರಾಡೂನ್ ಪೊಲೀಸರು ಟೀ ಅಂಗಡಿ ಬಳಿಯ ಸಂಭಾಷಣೆಯನ್ನು ಗಂಭೀರವಾಗಿ ಪರಿಗಣಿಸಿ ಪಕ್ಕಾ ಪ್ಲಾನ್ ರೂಪಿಸಿ ಬಹುದೊಡ್ಡ ದೊಡ್ಡ ಹಗರಣವನ್ನು ಬಯಲಿಗೆಳೆದಿದ್ದಾರೆ.

ಇತ್ತೀಚೆಗಷ್ಟೇ ಹರಿದ್ವಾರದ ರಾಣಿಪುರ್ ಪೊಲೀಸ್ ಠಾಣೆಯಲ್ಲಿ ಸೇವೆಗೆ ಸೇರಿದ ಪಂಕಜ್ ಶರ್ಮಾ ಎಂಬುವರು ಸಾಮಾನ್ಯ ಧಿರಿಸಿನಲ್ಲಿ ಸಮೀಪದ ಟೀ ಅಂಗಡಿಯೊಂದರ ಬಳಿ ಟೀ ಕುಡಿಯಲು ಹೋಗಿದ್ದರು. ಅಲ್ಲಿ ಕಿಡ್ನಿ ದಾನಿಗಳನ್ನು ಸಾಗಿಸುವ ಇಬ್ಬರು ವಾಹನ ಚಾಲಕರ ನಡುವೆ ನಗರದಲ್ಲಿನ ಗಂಗೋತ್ರಿ ಚಾರಿಟಬಲ್ ಆಸ್ಪತ್ರೆಯಲ್ಲಿನ ಕಿಡ್ನಿ ದಂಧೆ ಕುರಿತು ಸಂಭಾಷಣೆ ನಡೆಯುತ್ತಿತ್ತು.

ಅಷ್ಟೇ ಕೂಡಲೇ ಈ ಮಾಹಿತಿಯನ್ನು ಪಂಕಜ್ ಶರ್ಮಾ ನೇರವಾಗಿ ಪೋಲಿಸ್ ಠಾಣೆಯ ಹಿರಿಯ ಅಧಿಕಾರಿಗಳ ಕಿವಿಗೆ ಹಾಕಿದರು. ಅಷ್ಟೇ ಅಲ್ಲದೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಗಂಗೋತ್ರಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಕಿಡ್ನಿ ಮಾರಾಟ ದಂಧೆಯ ಕುರಿತು ಮಾಹಿತಿಯನ್ನು ನೀಡಿದ್ದರು. ನಂತರ ಕಣಕ್ಕಿಳಿದ ಪೊಲೀಸರು ಪಕ್ಕಾ ಯೋಜನೆ ರೂಪಿಸಿ ಆಸ್ಪತ್ರೆ ಸುತ್ತಮುತ್ತ ಒಂದು ತಿಂಗಳ ಕಾಲ ರಹಸ್ಯವಾಗಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿಯೂ ತಮ್ಮದೇ ಆದ ನೆಟ್ವರ್ಕ್ ನಿರ್ಮಿಸಿಕೊಂಡರು.

[ಇದನ್ನೂ ಓದಿ: ಬೇಕೆಂದೇ ಆತನನ್ನು ಟಾರ್ಗೆಟ್ ಮಾಡಿದೆವು : ಹಾರ್ಧಿಕ್ ಪಾಂಡ್ಯಾ]

ನಂತರ ರಹಸ್ಯ ಕ್ಯಾಮರಾಗಳ ಮೂಲಕ ಅಕ್ರಮಗಳಲ್ಲಿ ಭಾಗಿಯಾಗಿದ್ದವರ ಮಾಹಿತಿಯನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ವೈದ್ಯರಿಗೆ ಕಿಡ್ನಿಗಳನ್ನು ಸರಬರಾಜು ಮಾಡುತ್ತಿದ್ದ ಜಾವೇದ್ ಖಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣವನ್ನು ಬಯಲಿಗೆಳೆಯಲು ಪ್ರಮುಖ ಪಾತ್ರವಹಿಸಿದ ಪಂಕಜ್ ಶರ್ಮ ಅವರಿಗೆ ಮುಂದಿನ ವರ್ಷದ ಗಣರಾಜ್ಯೋತ್ಸವ ದಿನದಂದು ಪುರಸ್ಕಾರ ಸಿಗುವಂತೆ ರಾಜ್ಯ ಪೊಲೀಸ್ ಪ್ರಧಾನ ಕಛೇರಿಗೆ ಶಿಫಾರಸ್ಸು ಮಾಡಲಾಗಿದೆ.

Get Latest updates on WhatsApp. Send ‘Add Me’ to 8550851559

Loading...