ಭಾರತೀಯ ಸೇನೆಗೆ ನೆರವಾಗಲು ಬರುತ್ತಿವೆ ರೋಬೋಗಳು – News Mirchi

ಭಾರತೀಯ ಸೇನೆಗೆ ನೆರವಾಗಲು ಬರುತ್ತಿವೆ ರೋಬೋಗಳು

ನವದೆಹಲಿ: ಜಮ್ಮೂ ಕಾಶ್ಮೀರದಲ್ಲಿ ನಡೆಯುವ ಉಗ್ರರ ದಾಳಿಗಳು, ಸ್ಥಳೀಯ ಕಲ್ಲೆಸೆತಗಾರರನ್ನು ಎದುರಿಸಲು, ಬಾಂಬ್ ನಿಷ್ಕ್ರಿಯಗೊಳಿಸುವುದು ಮುಂತಾದ ಸಂದರ್ಭಗಳಲ್ಲಿ ಭಾರತೀಯ ಸೇನೆಗೆ ನೆರವಾಗಲು ಶೀಘ್ರದಲ್ಲೇ ರೋಬೋಗಳು ಬರಲಿವೆ. ಉಗ್ರರ ದಾಳಿಗಳು, ಗಲಭೆಕೋರರ ಯತ್ನಗಳನ್ನು ನಿಯಂತ್ರಿಸುವ ಸಲುವಾಗಿ ರೋಬೋಟಿಕ್ ವೆಪನ್ಸ್ ಅನ್ನು ಪರಿಚಯಿಸಲು ರಕ್ಷಣಾ ಸಚಿವಾಲಯ ಚಿಂತನೆ ನಡೆಸಿರುವುದಾಗಿ ವರದಿಯಾಗಿದೆ.

ತಮಗೆ 544 ರೋಬೋಗಳ ಅಗತ್ಯವಿದೆ ಎಂದು ಸೇನಾಧಿಕಾರಿಗಳು ಕಳುಹಿಸಿರುವ ಪ್ರಸ್ತಾವನೆಯನ್ನು ರಕ್ಷಣಾ ಸಚಿವಾಲಯ ಅನುಮೋದಿಸಿರುವುದಾಗಿ ತಿಳಿದುಬಂದಿದೆ. ಕಳೆದ ಎಂಟು ತಿಂಗಳಿನಿಂದ ಡಿ.ಆರ್.ಡಿ.ಒ ಪ್ರಯೋಗಾಲಯ ಈ ಪ್ರಾಜೆಕ್ಟ್ ಮೇಲೆ ಕಾರ್ಯನಿರತವಾಗಿದೆ. ಸೇನಾ ಕಾರ್ಯಚರಣೆಗಳಲ್ಲಿ ಭಾರತೀಯ ಸೇನೆಗೆ ರೋಬೋಟಿಕ್ ಅಸ್ತ್ರಗಳು ಉಗ್ರರ ವಿರುದ್ಧದ ಕಾರ್ಯಚರಣೆಯಲ್ಲಿ, ಕಲ್ಲೆಸೆಯುವವರಿಂದ ಮುಂತಾದ ಸಂದರ್ಭಗಳಲ್ಲಿ ನೆರವಾಗಲಿದ್ದು, ಸೈನಿಕರು ಗಾಯಾಳುಗಳಾಗುವುದನ್ನು ಗಣನೀಯವಾಗಿ ಕಡಿಮೆಯಾಗಬಹುದು ಎನ್ನಲಾಗುತ್ತಿದೆ. [ನಾವು ಹಸಿವು ಮುಕ್ತ ರಾಜ್ಯ ಅಂದ್ರೆ, ಬಿಜೆಪಿಯು ಕಾಂಗ್ರೆಸ್ ಮುಕ್ತ ಅಂತಿದೆ: ಸಿದ್ದರಾಮಯ್ಯ]

ವಿವಿಧ ವಾತಾವರಣಗಳು, ಭೂಪ್ರದೇಶಗಳಲ್ಲಿ ನಡೆಯುವ ಕಾರ್ಯಚರಣೆಗಳಿಗೆ ಅನುಕೂಲವಾಗುವಂತೆ ಸದ್ಯದ ಮಿಲಿಟರಿ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಈ ರೋಬೋ ಗಳನ್ನು ನಿರ್ಮಿಸಲಾಗುತ್ತಿದೆ. ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸುವುದರೊಂದಿಗೆ ಒಳಾಂಗಣದಲ್ಲೂ ಇವು ಸೇವೆ ಸಲ್ಲಿಸಬಹುದು ಎಂದು ಹೇಳಲಾಗುತ್ತಿದೆ.

ನಿಮ್ಮನ್ನು ಕೆಳಗಿಳಿಸಲೆಂದೇ ಅಮಿತ್ ಶಾ ಬಂದಿರುವುದು : ಪೂಜಾರಿ

Loading...