ರೋಹಿಂಗ್ಯಾ ಅಕ್ರಮ ವಲಸಿಗರ ವಿಷಯದಲ್ಲಿ ಕೇಂದ್ರದ ದೃಢ ನಿಲುವು |News Mirchi

ರೋಹಿಂಗ್ಯಾ ಅಕ್ರಮ ವಲಸಿಗರ ವಿಷಯದಲ್ಲಿ ಕೇಂದ್ರದ ದೃಢ ನಿಲುವು

ಮಯನ್ಮಾರ್ ನ ರೋಹಿಂಗ್ಯಾ ನಿರಾಶ್ರಿತರ ಬಗ್ಗೆ ಕೇಂದ್ರ ಸರ್ಕಾರ ಗುರುವಾರ ತನ್ನ ದೃಢ ನಿಲುವು ಪ್ರದರ್ಶಿಸಿದೆ. ಇಂತಹ ಅಕ್ರಮ ವಲಸಿಗರು ಭಾರತದಲ್ಲಿರಲು ಅವಕಾಶ ನೀಡಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ರೋಹಿಂಗ್ಯಾ ಅಕ್ರಮ ವಲಸಿಗರು ಭದ್ರತೆಗೆ ಮುಪ್ಪು ಎಂದು ಹೇಳಿರುವ ಸರ್ಕಾರ, ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವ ಅವರನ್ನು ಗಡೀಪಾರು ಮಾಡುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ಹೇಳಿದೆ.

ಪ್ರಮುಖ ರೋಹಿಂಗ್ಯಾ ನಾಯಕರು ಪಾಕಿಸ್ತಾನದ ಉಗ್ರಗಾಮಿ ಗುಂಪುಗಳ ಸಂಪರ್ಕದಲ್ಲಿದ್ದಾರೆ ಎಂದು ಟೈಮ್ಸ್ ನೌ ಸುದ್ದಿ ವಾಹಿನಿ ವರದಿ ಮಾಡಿತ್ತು. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವೂ ರೋಹಿಂಗ್ಯಾ ನಿರಾಶ್ರಿತರು ಭದ್ರತೆಗೆ ಮುಪ್ಪು ಎಂದು ಪರಗಣಿಸಿದೆ.

ಭಾರತ ಸರ್ಕಾರವು ರೋಹಿಂಗ್ಯಾ ನಿರಾಶ್ರಿತರನ್ನು ಪುನಃ ಮಯನ್ಮಾರ್ ಗೆ ಕಳುಹಿಸಲು ಚಿಂತನೆ ನಡೆಸಿರುವುದಕ್ಕೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ಅಸಮಾಧಾನ ವ್ಯಕ್ತಪಡಿಸಿದ್ದು, ಇದಕ್ಕೆ ಭಾರತ ತಿರುಗೇಟು ನೀಡಿದೆ. ಭಾರತವು ತನ್ನ ಭದ್ರತೆಗೆ ಸಂಬಂಧಿಸಿತಂತೆ ನಿರ್ಲಕ್ಷಿಸುವುದು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಹೇಳಿದ್ದಾರೆ.

ಇತರೆ ದೇಶಗಳಂತೆಯೇ ಭಾರತಕ್ಕೂ ಅಕ್ರಮ ವಲಸಿಗರ ವಿಷಯದಲ್ಲಿ ಆತಂಕವಿದೆ. ಕಾನೂನುಗಳನ್ನು ಅನುಷ್ಠಾನಗೊಳಿಸುವ ಕುರಿತು ತಪ್ಪಾಗಿ ಭಾವಿಸಬಾರದು ಎಂದು ರಾಯಭಾರಿ ರಾಜೀವ್ ಕೆ.ಚಂದರ್ ಹೇಳಿದ್ದಾರೆ.

[ಇದನ್ನೂ ಓದಿ: ಅಕ್ರಮಗಳು ಕಂಡುಬಂದ 46 ಮದರಸಾಗಳಿಗೆ ಅನುದಾನ ಸ್ಥಗಿತಗೊಳಿಸಿದ ಯೋಗಿ ಸರ್ಕಾರ]

ಮಯನ್ಮಾರಿನಲ್ಲಿ ಸುಮಾರು 11 ಲಕ್ಷ ರೋಹಿಂಗ್ಯಾ ಮುಸ್ಲಿಮರಿದ್ದಾರೆ. ಆದರೆ ಅಲ್ಲಿ ಅವರು ತಾರತಮ್ಯವನ್ನು ಎದುರಿಸುತ್ತಿದ್ದು, ಅಲ್ಲಿ ಅವರಿಗೆ ಪೌರತ್ವವನ್ನು ನಿರಾಕರಿಸಲಾಗಿದೆ. ಸುಮಾರು 3,79,000 ರೋಹಿಂಗ್ಯಾಗಳು ಈಗಾಗಲೇ ಅಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಹೆದರಿ ಮಯನ್ಮಾರ್ ತೊರೆದಿದ್ದಾರೆ. ರೋಹಿಂಗ್ಯಾ ಉಗ್ರಗಾಮಿಗಳು ಮಯನ್ಮಾರ್ ಪೊಲೀಸ್ ಪೋಸ್ಟ್ ಗಳ ಮೇಲೆ ದಾಳಿ ನಡೆದ ನಂತರ ಈ ಹಿಂಸಾಚಾರ ಆರಂಭವಾಗಿತ್ತು.

Loading...
loading...
error: Content is protected !!