ರೈಲಿನಲ್ಲಿ ಪ್ರತ್ಯೇಕ ಬೋಗಿಯಲ್ಲಿ ಕಪ್ಪು ಹಣ, ಒಡವೆ ಸಾಗಿಸುತ್ತಿದ್ದ ಅಧಿಕಾರಿ ಬಂಧನ

ಚೆನ್ನೈ: ರೈಲಿನಲ್ಲಿ ಪ್ರತ್ಯೇಕ ಬೋಗಿಯಲ್ಲಿ ರೈಲ್ವೇ ಭದ್ರತಾ ಅಧಿಕಾರಿಯೊಬ್ಬರು ಕಪ್ಪು ಹಣ, ಚಿನ್ನಾಭರಣಗಳನ್ನು ಸಾಗಿಸುತ್ತಿದ್ದಾಗ, ಸಿಬಿಐ ಬಲೆಗೆ ಬಿದ್ದಿದ್ದಾರೆ. ನಗದು ಮತ್ತು ಚಿನ್ನಾಭರಣವನ್ನು ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದು. ಈ ಘಟನೆ ಮಂಗಳವಾರ ತಮಿಳುನಾಡಿನಲ್ಲಿ ನಡೆದಿದೆ. ಆರ್.ಪಿ.ಎಫ್ ಐಜಿ ಆದ ಅಧಿಕಾರಿಯನ್ನು ಸಿಬಿಐ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಒಡಿಶಾದ ಭುವನೇಶ್ವರ್ ನ ಎಸ್.ಕೆ. ಪಾರಿ ಚೆನ್ನೈ ಐಸಿಎಫ್ ನಲ್ಲಿ ಭದ್ರತಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್.ಪಿ.ಎಫ್ ಶ್ರೇಣಿಯ ಹುದ್ದೆಯಲ್ಲಿದ್ದ ಪಾರಿ, ತಿರುಚ್ಚಿಯಿಂದ ಚೆನ್ನೈ ಮೂಲಕ ಹೌರಾಗೆ ಹೋಗುವ ರೈಲಿನಲ್ಲಿ ಪ್ರತ್ಯೇಕವಾಗಿ ಒಂದು ಬೋಗಿಯನ್ನು ರಿಸರ್ವ್ ಮಾಡಿಸಿದ್ದರು.

ಈ ಬೋಗಿಯಲ್ಲಿ ಕಪ್ಪು ಹಣ, ಒಡವೆ ಸಾಗಿಸುತ್ತಿದ್ದಾಗ ಸಿಬಿಐ ಗೆ ಮಾಹಿತಿ ಹೋಗಿದೆ. ಹೀಗಾಗಿ ಎಂಟು ಜನ ಸಿಬಿಐ ಅಧಿಕಾರಿಗಳ ತಂಡ ಚೆನ್ನೈನಲ್ಲಿ ಎಗ್ಮೂರ್ ಸ್ಟೇಷನ್ ನಲ್ಲಿ ಸಿದ್ಧರಾಗಿದ್ದು, ಅಲ್ಲಿಗೆ ರೈಲು ಬಂದೊಡನೆ ಹೌರಾ ರೈಲಿನಲ್ಲಿದ್ದ ಪ್ರತ್ಯೇಕ ಬೋಗಿಯನ್ನು ಸೀಜ್ ಮಾಡಿ ರೈಲನ್ನು ಕಳುಹಿಸಿದರು. ಬೋಗಿಯಲ್ಲಿ ದೊಡ್ಡ ಮೊತ್ತದ ಕಪ್ಪು ಹಣ, ಒಡವೆ ಇದೆ ಎಂದು ತಿಳಿದು ಬಂದಿದೆ. ಅವೆಲ್ಲಾ ಒಬ್ಬರೇ ವ್ಯಕ್ತಿಗೆ ಸೇರಿದ್ದಾ? ಅಥವಾ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳದ್ದಾ? ಎಂಬುದರ ಬಗ್ಗೆ ಸಿಬಿಐ ವಿಚಾರಣೆ ನಡೆಸುತ್ತಿದೆ.

Loading...

Leave a Reply

Your email address will not be published.

error: Content is protected !!