ಕೃಷಿ ಸಾಲಗಳಿಗೆ ರೂ.10 ಲಕ್ಷ ಕೋಟಿ ಮೀಸಲು, ಮತ್ತಷ್ಟು ಮುಖ್ಯಾಂಶಗಳು…

ಕೇಂದ್ರ ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ವಾರ್ಷಿಕ ಬಡ್ಜೆಟ್ ಮಂಡಿಸುತ್ತಿದ್ದಾರೆ. ಅವರ ಭಾಷಣದಲ್ಲಿನ ಮುಖ್ಯಾಂಶಗಳು.

ಕೃಷಿ ಸಾಲಗಳಿಗೆ ರೂ.10 ಲಕ್ಷ ಕೋಟಿ ಮೀಸಲು. ಈಶಾನ್ಯ ಮತ್ತು ಜಮ್ಮು ಕಾಶ್ಮೀರ ಕೃಷಿ ಕ್ಷೇತ್ರಕ್ಕೆ 60 ದಿನಗಳ ಬಡ್ಡಿ ವಿನಾಯಿತಿ. ನಬಾರ್ಡ್, ಸಹಕಾರ ಬ್ಯಾಂಕುಗಳು ಮತ್ತು ವ್ಯವಸಾಯ ಸಂಘಗಳಿಗೆ ಸಂಪರ್ಕ ಕಲ್ಪಿಸುವುದು. ಪ್ರತಿ ಕೃಷಿ ಕ್ಷೇತ್ರದಲ್ಲೂ ಮಣ್ಣಿನ ಪರೀಕ್ಷಾ ಕೇಂದ್ರಗಳ ನಿರ್ಮಾಣ. ನಿರಾವರಿ ಸೌಲಭ್ಯಕ್ಕಾಗಿ ರೂ.40 ಸಾವಿರ ಕೋಟಿಯ ಕಾರ್ಪಸ್ ಫಂಡ್ ರಚನೆ.

ರೈತರು, ಗ್ರಾಮೀಣ ಉದ್ಯೋಗಗಳಿಗೆ ಹೆಚ್ಚು ಒತ್ತು ಕೊಡಲಾಗುವುದು. ಆರ್ಥಿಕ ಸುಸ್ತಿದಾರರಿಗೆ ಸೇರಿದ ಆಸ್ತಿ ವಶಪಡಿಸಿಕೊಳ್ಳಲು ಹೊಸ ಕಾನೂನು ತರಲಾಗುವುದು. ಚಿಟ್ ಫಂಡ್ ವ್ಯವಹಾರದ ನಿಯಂತ್ರಣಕ್ಕೆ ಹೊಸ ಕಾನೂನು. ಆನ್ಲೈನ್ ನಲ್ಲಿ ರೈಲು ಟಿಕೆಟ್ ಬುಕ್ ಮಾಡಿದರೆ ಸೇವಾ ಶುಲ್ಕವಿಲ್ಲ. ಸಣ್ಣ ನಗರಗಳಲ್ಲಿಯೂ ವಿಮಾನ ನಿಲ್ದಾಣಗಳ ನಿರ್ಮಾಣ ಮಾಡಲಾಗುತ್ತದೆ.

1.5 ಲಕ್ಷ ಹಳ್ಳಿಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ನೀಡಲಾಗುವುದು. ಮುಖ್ಯ ಅಂಚೆ ಕಛೇರಿಯಲ್ಲೂ ಪಾಸ್ಪೋರ್ಟ್ ಪಡೆಯಬಹುದು. 3500 ಕಿಮೀ ಉದ್ದದ ಹೊಸ ರೈಲು ಮಾರ್ಗ ನಿರ್ಮಿಸಲಾಗುವುದು. 2020 ರ ವೇಳೆಗೆ ಎಲ್ಲಾ ರೈಲ್ವೇ ಕ್ರಾಸಿಂಗ್ ಗಳು ಮಾನವ ರಹಿತ. ನೋಟ್ ಬ್ಯಾನ್ ನಂತರ ತೆರಿಗೆ ಸುಧಾರಣೆಗೆ ಅನುಕೂಲವಾಗಿದ್ದು, ಶೇ.38 ರಷ್ಟು ತೆರಿಗೆ ಸಂಗ್ರಹ ಹೆಚ್ಚಾಗಿದೆ ಎಂದರು.

3 ಲಕ್ಷಕ್ಕಿಂತ ಹೆಚ್ಚು ನಗದು ಪಾವತಿ ಮಾಡುವ ಹಾಗಿಲ್ಲ, ಚೆಕ್ ಮೂಲಕ ಅಥವಾ ಆನ್ಲೈನ್ ಪಾವತಿ ಮಾಡಬಹುದು. ರಾಜಕೀಯ ಪಕ್ಷಗಳು ರೂ.2 ಸಾವಿರವರೆಗೂ ನಗದನ್ನು ದೇಣಿಗೆಯಾಗಿ ಸ್ವೀಕರಿಸಬಹುದು, ಅದಕ್ಕಿಂತ ಹೆಚ್ಚಿನ ಮೊತ್ತದ ದೇಣಿಗೆಗೆ ಗುರುತಿನ ಚೀಟಿ ಕಡ್ಡಾಯ. 2.5 ಲಕ್ಷದಿಂದ 5 ಲಕ್ಷದವರೆಗಿನ ಆದಾಯಕ್ಕೆ ಶೇ.5 ರಷ್ಟು ತೆರಿಗೆ (ಈ ಹಿಂದೆ ಶೇ.10 ರಷ್ಟಿತ್ತು). 5 ರಿಂದ 10 ಲಕ್ಷದವರೆಗಿನ ಆದಾಯಕ್ಕೆ ಶೇ.20 ತೆರಿಗೆ. 10 ಲಕ್ಷಕ್ಕೂ ಹೆಚ್ಚಿನ ಆದಾಯಕ್ಕೆ ಶೇ.30 ರಷ್ಟು ತೆರಿಗೆ.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache