ಮುದ್ರಣವಾಗುತ್ತಿವೆ ಹೊಸ 200 ರ ನೋಟುಗಳು – News Mirchi

ಮುದ್ರಣವಾಗುತ್ತಿವೆ ಹೊಸ 200 ರ ನೋಟುಗಳು

ಹಳೆಯ 500 ಮತ್ತು 1000 ಮುಖಬೆಲೆಯ ನೋಟು ರದ್ದಾದ ನಂತರ ಉದ್ಭವಿಸಿದ ನೋಟು ಕೊರತೆ ಕೊನೆಯಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ರೂ.200 ರ ಮುಖಬೆಲೆಯ ನೋಟುಗಳ ಮುದ್ರಣವನ್ನು ಆರಂಭಿಸಿದ್ದು, ಮುದ್ರಣ ಕಾರ್ಯ ಜೋರಾಗಿ ಸಾಗಿದೆ ಎಂದು ಸಂಬಂಧಿಸಿದ ಮೂಲಗಳು ಹೇಳಿವೆ ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಹೊಸ ರೂ.200 ರ ನೋಟುಗಳಿಂದ ಚಿಲ್ಲರೆ ಸಮಸ್ಯೆಗಳು ಬಹುತೇಕ ಬಗೆಹರಿಯಲಿದ್ದು, ಹೊಸ ನೋಟುಗಳು ಹೆಚ್ಚು ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರಲಿವೆ.

ಹಳೆಯ 500, 1000 ಮುಖಬೆಲೆಯ ನೋಟು ರದ್ದುಗೊಂಡ ನಂತರ ಹೊಸದಾಗಿ 2000 ಮುಖಬೆಲೆಯ ನೋಟು ಮತ್ತು 500 ರ ಹೊಸ ನೋಟು ಚಲಾವಣೆಗೆ ತರಲಾಗಿತ್ತು. ಅದರೆ ದೊಡ್ಡ ನೋಟುಗಳು ಮಾರುಕಟ್ಟೆಯಲ್ಲಿ ಹೆಚ್ಚು ಚಲಾವಣೆಗೆ ಬಂದಿದ್ದರಿಂದ, ಜನರಿಗೆ ಚಿಲ್ಲರೆ ಸಮಸ್ಯೆ ಎದುರಾಗಿತ್ತು. ಕೈಯಲ್ಲಿ ಹಣವಿದ್ದರೂ ಖರ್ಚು ಮಾಡಲಾರದ ಪರಿಸ್ಥಿತಿ ಎದುರಾಗಿತ್ತು.

ಈ ಸಮಸ್ಯೆಗಳಿಗೆ ಅಂತ್ಯ ಹಾಡಲು ರೂ.200 ಮುಖಬೆಲೆಯ ನೋಟುಗಳನ್ನು ಆಧುನಿಕ ಭದ್ರತಾ ವೈಶಿಷ್ಟ್ಯಗಳೊಂದಿಗೆ ಮುದ್ರಿಸಲಾಗುತ್ತಿದ್ದು, ಅಧಿಕಾರಿಗಳು ಈ ನೋಟುಗಳ ವಿಷಯದಲ್ಲಿ ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ನೋಟುಗಳ ಭದ್ರತಾ ಮಾನದಂಡಗಳನ್ನು ಮಧ್ಯಪ್ರದೇಶದ ವಿವಿಧ ಹಂತಗಳಲ್ಲಿ ಪರಿಶೀಲಿಸುತ್ತಿದ್ದಾರೆ ಎನ್ನಲಾಗುತ್ತಿದೆ.

Loading...