ಐಟಿ ಅಧಿಕಾರಿಗಳಿಗೆ ದಾರಿ ತೋರುತ್ತಿವೆಯಾ ಹೊಸ ನೋಟು?

​ಕೆಲವು ದಿನಗಳಿಂದ ದೇಶದಲ್ಲಿ ದಾಳಿ ನಡೆಸುತ್ತಿರುವ ತೆರಿಗೆ ಇಲಾಖೆ ಅಧಿಕಾರಿಗಳು, ಕೋಟ್ಯಾಂತರ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳನ್ನು ಸ್ವಾಧೀನ ಪಡಿಸಿಕೊಳ್ಳುತ್ತಿದ್ದಾರೆ. ಏಕಾಏಕಿ ಇಂತಹ ಯಶಸ್ವಿ ದಾಳಿಗಳು ನಡೆಯುತ್ತಿದ್ದು, ದಾಳಿ ನಡೆದ ಕಡೆಯಲ್ಲೆಲ್ಲಾ ಹೊಸ ನೋಟುಗಳನ್ನು ಅಕ್ರಮವಾಗಿ ಸಂಗ್ರಹಿಸಿರುವುದು ಪತ್ತೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹೊಸ 2000 ರ ನೋಟಿನಲ್ಲಿ ಏನಿರಬಹುದು ಎಂಬ ಪ್ರಶ್ನೆಗಳು ಏಳುತ್ತಿವೆ.

ಈ ಹಿಂದೆ ಹೊಸ ನೋಟಿನಲ್ಲಿ ಚಿಪ್ ಅಳವಡಿಸಲಾಗಿದೆ, ಅದರಿಂದಾಗಿ ಆ ನೋಟುಗಳನ್ನು ಎಲ್ಲಿ ಅಡಗಿಸಿದರೂ ಪತ್ತೆ ಹಚ್ಚಬಹುದು ಎಂಬ ವದಂತಿಗಳು ಹಬ್ಬಿದ್ದವು. ಆದರೆ ಸ್ವತಃ ರಿಸರ್ವ್ ಬ್ಯಾಂಕ್ ಇದನ್ನು ಅಲ್ಲಗೆಳೆದಿತ್ತು.

ಇದೀಗ ಮತ್ತೊಂದು ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಅದೇನೆಂದರೆ ಹೊಸ ನೋಟುಗಳಲ್ಲಿ ರೇಡಿಯೋ ಆಕ್ಟೀವ್ ಇಂಕ್ ಇದ್ದು, ಅದರ ಸಹಾಯದಿಂದಲೇ ಐಟಿ ಅಧಿಕಾರಿಗಳು ಅಡಗಿಸಿಟ್ಟ ಹೊಸ ನೋಟುಗಳನ್ನು ಪತ್ತೆ ಹಚ್ಚುತ್ತಿದ್ದಾರೆ ಎನ್ನಲಾಗುತ್ತಿದೆ.

ಹೊಸ ನೋಟುಗಳಲ್ಲಿ ಫಾಸ್ಫರಸ್-32 ಎಂಬ ರೇಡಿಯೋ ಆಕ್ಟೀವ್ ಇಂಕ್, ವಿಕಿರಣ ಹೊರಸೂಸುತ್ತದೆ. ಹೀಗಾಗಿ ಭಾರೀ ಮೊತ್ತದ 2000 ರೂಪಾಯಿಗಳ ನೋಟು ಒಂದು ಕಡೆ ಇಟ್ಟಾಗ ಆ ವಿಕಿರಣದ ಪ್ರಮಾಣ ಹೆಚ್ಚುತ್ತದೆ. ಐಟಿ ಅಧಿಕಾರಿಗಳು ಈ ರೇಡಿಯೋ ವಿಕಿರಣ ಪತ್ತೆ ಹಚ್ಚುವ ಉಪಕರಣಗಳನ್ನು ಬಳಸಿ ಹೆಚ್ಚು ರೇಡಿಯೇಷನ್ ಹೊರಸೂಸುವ ಪ್ರದೇಶಗಳ ಮೇಲೆ ದಾಳಿ ನಡೆಸಿ ಕಪ್ಪು ಹಣವನ್ನು ಪತ್ತೆ ಹಚ್ಚುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳಲಿಲ್ಲದ ಕಾರಣ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ.

Related News

Loading...

Leave a Reply

Your email address will not be published.

error: Content is protected !!