ಆನ್ಲೈನ್ ನಲ್ಲಿ ಗ್ಯಾಸ್ ಗೆ ಪಾವತಿಸಿ, ರೂ. 5 ರಿಯಾಯಿತಿ ಪಡೆಯಿರಿ – News Mirchi

ಆನ್ಲೈನ್ ನಲ್ಲಿ ಗ್ಯಾಸ್ ಗೆ ಪಾವತಿಸಿ, ರೂ. 5 ರಿಯಾಯಿತಿ ಪಡೆಯಿರಿ

ನವದೆಹಲಿ: ಅಡುಗೆ ಅನಿಲ(ಎಲ್ಪಿಜಿ) ಕ್ಕಾಗಿ ಆನ್ಲೈನ್ ನಲ್ಲಿ ಪಾವತಿ ಮಾಡುವ ಗ್ರಾಹಕರಿಗೆ ರೂ.5 ರಿಯಾಯಿತಿ ಸಿಗುತ್ತದೆ. ಈ ಕುರಿತು ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಪ್ರಕಟಿಸಿವೆ.

ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಬಳಸಿ, ಡೆಬಿಟ್ ಕಾರ್ಡ್ ಉಪಯೋಗಿಸಿ ಎಲ್‌ಪಿಜಿ ಸಿಲಿಂಡರ್ ಹಣವನ್ನು ಪಾವತಿಸಬಹುದು. ಆನ್ಲೈನ್ ಪಾವತಿ ಮಾಡುತ್ತಿರುವ ಸಂದರ್ಭದಲ್ಲಿಯೇ ಪರದೆ ಮೇಲೆ ರಿಯಾಯಿತಿ ವಿವರ ಕಾಣಿಸುತ್ತದೆ.

ನಿಮ್ಮ ಮನೆ ಬಳಿಗೆ ಸಿಲಿಂಡರ್ ಸರಬರಾಜು ಮಾಡುವವರು ನೀಡುವ ರಸೀದಿಯಲ್ಲಿಯೂ ರಿಯಾಯಿತಿ ಮೊತ್ತ ತೋರಿಸಿರುತ್ತಾರೆ. ನಗದು ರಹಿತ ವ್ಯವಹಾರಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

Loading...

Leave a Reply

Your email address will not be published.