ಎಸ್‌ಬಿಐ ಎಟಿಎಂ ಗಳಲ್ಲಿ ರೂ. 50, 20 ನೋಟು

ರೂ. 500, 1000 ಮುಖಬೆಲೆಯ ನೋಟು ರದ್ದಾದ ಹಿನ್ನೆಲೆಯಲ್ಲಿ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಬ್ಯಾಂಕುಗಳ ನಿರ್ಧಾರ ತುಸು ನೆಮ್ಮದಿ ನೀಡಿದೆ. ಉಳಿತಾಯ ಖಾತೆ ಹೊಂದಿರುವವರಿಂದ ವಸೂಲಿ ಮಾಡುವ ಎಟಿಎಂ ಶುಲ್ಕಗಳನ್ನು ರದ್ದು ಮಾಡುತ್ತಿರುವುದಾಗಿ ಬ್ಯಾಂಕುಗಳು ಪ್ರಕಟಿಸಿವೆ. ಈಗಾಗಲೇ ರಿಸರ್ವ್ ಬ್ಯಾಂಕ್ ಹಣ ಹಿಂತೆಗೆಯುವ ಮಿತಿಗಳನ್ನು ಹೆಚ್ಚಳ ಮಾಡಿದೆ.

ನೋಟು ಬದಲಾವಣೆ ಗೊಂದಲ ಕಡಿಮೆಯಾದ ನಂತರ ಎಸ್‌ಬಿಐ ಎಟಿಎಂ ಗಳಲ್ಲಿ ರೂ. 50, 20 ರ ಮುಖಬೆಲೆಯ ನೋಟುಗಳನ್ನು ತರಲಿದೆ ಎಂದು ಎಸ್‌ಬಿ‌ಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ. ಇದರ ಮೂಲಕ ಜನರಿಗೆ ಚಿಲ್ಲರೆ ಕೊರತೆ ನೀಗಲಿದೆ.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache