Warning: preg_match(): Compilation failed: range out of order in character class at offset 33 in /home1/newsmg7m/public_html/wp-content/plugins/json-api/singletons/api.php on line 294
ಕೇರಳದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತನ ಬರ್ಬರ ಹತ್ಯೆ – News Mirchi

ಕೇರಳದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತನ ಬರ್ಬರ ಹತ್ಯೆ

ತಿರುವನಂತಪುರ: ಕೇರಳ ರಾಜಧಾನಿ ತಿರುವನಂತಪುರಂ ನಲ್ಲಿ ಆರ್.ಎಸ್.ಎಸ್ ಕಾರ್ಯಕರ್ತರೊಬ್ಬರು ಬರ್ಬರವಾಗಿ ಕೊಲೆಯಾಗಿದ್ದಾರೆ. 34 ವರ್ಷದ ರಾಜೇಶ್ ಶುಕ್ರವಾರ ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದಾಗ, ಕೆಲ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿ ಎಡಗೈಯನ್ನು ಕತ್ತರಿಸಿದ್ದಾರೆ

ಗಂಭೀರವಾಗಿ ಗಾಯಗೊಂಡ ರಾಜೇಶ್, ಚಿಕಿತ್ಸೆ ಪಡೆಯುತ್ತಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಸಿಪಿಎಂ ಕಾರ್ಯಕರ್ತರೇ ರಾಜೇಶ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದೆ. ರಾಜೇಶ್ ಹತ್ಯೆಯನ್ನು ಪ್ರತಿಭಟಿಸಿ ಶನಿವಾರ ಕೇರಳದಲ್ಲಿ ಬಂದ್ ಕರೆ ನೀಡಲಾಗಿತ್ತು.

ಕಿಡ್ನಿ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ, ಇಲ್ಲಿದೆ ಕೆಲವು ಸಲಹೆ

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿರುವುದಾಗಿ ಹೇಳಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಕೇರಳದ ಬಿಜೆಪಿ ರಾಜ್ಯ ಕಛೇರಿಯ ಮೇಲೆ ಅಪರಿಚಿತ ವ್ಯಕ್ತಿಗಳೂ ದಾಳಿ ನಡೆಸಿದ್ದರು.

Contact for any Electrical Works across Bengaluru

Loading...
error: Content is protected !!