ಜಿಲ್ಲಾಧಿಕಾರಿ ಆದೇಶ ಧಿಕ್ಕರಿಸಿ ದ್ವಜಾರೋಹಣ ನಡೆಸಿದ ಮೋಹನ್ ಭಾಗವತ್ – News Mirchi

ಜಿಲ್ಲಾಧಿಕಾರಿ ಆದೇಶ ಧಿಕ್ಕರಿಸಿ ದ್ವಜಾರೋಹಣ ನಡೆಸಿದ ಮೋಹನ್ ಭಾಗವತ್

ಕೇರಳದಲ್ಲಿನ ಪಾಲಕ್ಕಾಡ್ ಜಿಲ್ಲಾಧಿಕಾರಿ ನೀಡಿದ ಆದೇಶಗಳನ್ನು ಧಿಕ್ಕರಿಸಿ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪಾಲಕ್ಕಾಡ್ ಸರ್ಕಾರಿ ಪಾಠ ಶಾಲೆಯಲ್ಲಿ ತ್ರಿವರ್ಣ ದ್ವಜ ಹಾರಿಸಿದರು. ಪಾಠ ಶಾಲೆಗಳಲ್ಲಿ ದ್ವಜಾರೋಹಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಇತ್ತೀಚೆಗೆ ಕೆಲ ಆದೇಶಗಳನ್ನು ಜಾರಿ ಮಾಡಿದ್ದರು. ಕಾರ್ಯಕ್ರಮ ಆರಂಭವಾಗುವುದಕ್ಕೆ ಕೆಲವೇ ಗಂಟೆಗಳ ಮುನ್ನ ಈ ಆದೇಶವನ್ನು ಶಾಲೆಗೆ ತಲುಪಿಸಿದ್ದರು.

ಶಾಲಾ ಶಿಕ್ಷಕರು ಅಥವಾ ಚುನಾಯಿತ ಜನಪ್ರತಿನಿಧಿಗಳು ಮಾತ್ರ ದ್ವಜಾರೋಹಣ ನಡೆಸಬೇಕು ಎಂದು ಆದೇಶಿಸಿದ್ದರು. ಆದರೆ ಈ ನಿರ್ಬಂಧಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ದೇಶಪೂರ್ವಕವಾಗಿ ಮೋಹನ್ ಭಾಗವತ್ ಅವರಿಂದ ದ್ವಜಾರೋಹಣ ತಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಜಿಲ್ಲಾಧಿಕಾರಿ ಆದೇಶಗಳನ್ನು ವಿರೋಧಿಸಿ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ದ್ವಜಾರೋಹಣ ಮಾಡಿದರು. ಸ್ವಾತಂತ್ರ್ಯ ದಿನಾಚರಣೆಯಂದು ಯಾರು ಬೇಕಾದರೂ ಪಾಠಶಾಲೆಯಲ್ಲಿ ದ್ವಜಾರೋಹಣ ನಡೆಸಬಹುದು ಎಂದು ಆರ್.ಎಸ್.ಎಸ್ ನಾಯಕರು ಹೇಳುತ್ತಿದ್ದಾರೆ.

ಇನ್ನು ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ದ್ವಜಾರೋಹಣ ನಡೆಸಿದ ಮೋಹನ್ ಭಾಗವತ್ ವಿರುದ್ಧ ಕ್ರಮಕ್ಕೆ ಅಧಿಕಾರಿಗಳು ಸಿದ್ಧರಾಗುತ್ತಿದ್ದಾರೆ.

ಜಿಲ್ಲಾಧಿಕಾರಿ ಕಮ್ಯೂನಿಷ್ಟ್ ಪಕ್ಷದ ಶಾಖೆಯ ಕಾರ್ಯದರ್ಶಿಯಂತೆ ವರ್ತಿಸುತ್ತಿದ್ದಾರೆ, ಹೀಗಾಗಿಯೇ ಕಳೆದ ರಾತ್ರಿ 11 ಗಂಟೆಗೆ ಸರ್ಕ್ಯುಲರ್ ಕಳುಹಿಸಿದ್ದಾರೆ ಎಂದು ಪಾಲಕ್ಕಾಡ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಇ.ಕೃಷ್ಣದಾಸ್ ಆರೋಪಿಸಿದ್ದಾರೆ.

Loading...