rss

ಅಗತ್ಯ ಬಿದ್ದರೆ ದೇಶಕ್ಕಾಗಿ ಗಡಿಯಲ್ಲಿ ನಿಂತು ಹೋರಾಡಲು ಆರ್.ಎಸ್.ಎಸ್ ಸಿದ್ಧ

ಅಗತ್ಯ ಬಿದ್ದರೆ ಗಡಿಯಲ್ಲಿ ನಿಂತು ಹೋರಾಡಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಿದ್ಧವಿದೆ ಎಂದು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಹತ್ತು ದಿನಗಳ ಬಿಹಾರ ಪ್ರವಾಸ ಕೈಗೊಂಡಿರುವ ಮೋಹನ್ ಭಾಗವತ್, ಮುಜಫರನಗರದಲ್ಲಿ ಆರ್.ಎಸ್.ಎಸ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.

rss

ಕೆಲವೇ ದಿನಗಳಲ್ಲಿ ದೇಶಕ್ಕಾಗಿ ಹೋರಾಡಲು ಆರ್.ಎಸ್.ಎಸ್ ಸೇನೆಯನ್ನು ರಚಿಸುವಷ್ಟು ಸಾಮರ್ಥ್ಯ ಹೊಂದಿದೆ. ಯುದ್ಧಕ್ಕೆ ಸಿದ್ಧವಾಗಲು ಸೇನೆಗೆ ಆರು ತಿಂಗಳು ಸಮಯ ಬೇಕಾಗಬಹುದು, ಆದರೆ ಕೇವಲ 2-3 ದಿನಗಳಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಯುದ್ಧಕ್ಕೆ ಸಿದ್ಧವಾಗಬಲ್ಲದು ಎಂದು ಹೇಳಿದ್ದಾರೆ.

ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯಕ್ಕೆ ಶಂಕುಸ್ಥಾಪನೆ

ಸ್ವಯಂ ಸೇವಕ ಸಂಘವು ಮಿಲಿಟರಿ ಸಂಸ್ಥೆಯಲ್ಲ, ಆದರೆ ಮಿಲಿಟರಿಯ ಶಿಸ್ತನ್ನು ಹೊಂದಿದ್ದೇವೆ. ದೇಶಕ್ಕೆ ಅಗತ್ಯ ಬಿದ್ದರೆ, ಸಂವಿಧಾನವು ಅವಕಾಶ ಮಾಡಿಕೊಟ್ಟರೆ ಆರ್.ಎಸ್.ಎಸ್ ಗಡಿಯಲ್ಲಿ ಶತೃವಿನ ವಿರುದ್ಧ ಹೋರಾಡಲು ಸಿದ್ಧ ಎಂದು ಅವರು ಹೇಳಿದ್ದಾರೆ.

Get Latest updates on WhatsApp. Send ‘Subscribe’ to 8550851559