ಕೇರಳ: ನಡುರಸ್ತೆಯಲ್ಲಿಯೇ ಮತ್ತೊಬ್ಬ ಆರ್.ಎಸ್.ಎಸ್ ಕಾರ್ಯಕರ್ತನ ಹತ್ಯೆ – News Mirchi

ಕೇರಳ: ನಡುರಸ್ತೆಯಲ್ಲಿಯೇ ಮತ್ತೊಬ್ಬ ಆರ್.ಎಸ್.ಎಸ್ ಕಾರ್ಯಕರ್ತನ ಹತ್ಯೆ

ಕೊಚ್ಚಿ: ಕೇರಳದಲ್ಲಿ ನಡುರಸ್ತೆಯಲ್ಲಿಯೇ ಆರ್.ಎಸ್.ಎಸ್ ಕಾರ್ಯರ್ತರೊಬ್ಬರು ಹತ್ಯೆಯಾಗಿದ್ದಾರೆ. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿಪಿನ್ ಎಂಬುವವರನ್ನು ಗುರುವಾರ ಬೆಳಗ್ಗೆ ಮಲಪ್ಪುರಂ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಇರಿದು ಕೊಂದಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ರಾಜಕೀಯ ಕೊಲೆಗಳು ಹೆಚ್ಚಾಗುತ್ತಿದ್ದು, ಈಗ ವಿಪಿನ್ ಕೊಲೆಯು ರಾಜ್ಯದಲ್ಲಿ ಉದ್ವಿಘ್ನ ಪರಿಸ್ಥಿತಿಗೆ ಕಾರಣವಾಗಲಿದೆ ಎನ್ನಲಾಗುತ್ತಿದೆ. ವಿಪಿನ್ ಕೊಲೆಯ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶವಾದ ಕೊಡಿಂಜಿಯಲ್ಲಿ ಉದ್ವಿಘ್ನತೆ ನೆಲೆಸಿದ್ದು, ಜಿಲ್ಲೆಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಫೈಜಲ್ ಪುಲ್ಲನೀ ಅಲಿಯಾಸ್ ಅನೀಶ್ ಕುಮಾರ್ ಹತ್ಯೆ ಪ್ರಕರಣದಲ್ಲಿ ವಿಪಿನ್ ಆರೋಪಿಯಾಗಿದ್ದಾನೆ. 8 ತಿಂಗಳ ಹಿಂದೆ ಇಸ್ಲಾಂ ಗೆ ಮತಾಂತರವಾದನೆಂಬ ಕಾರಣದಿಂದ ಫೈಜಲ್ ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಫೈಜಲ್ ಸೇರಿದಂತೆ ಆತನ ಕುಟುಂಬದ 8 ಸದಸ್ಯರು ಕಳೆದ ತಿಂಗಳು ಇಸ್ಲಾಂಗೆ ಮತಾಂತರವಾಗಿದ್ದರು. ಫೈಜಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ವಿಪಿನ್ ಕಳೆದ ವಾರವಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

[ಇದನ್ನೂ ಓದಿ: 9 ವರ್ಷಗಳ ನಂತರ ಜೈಲಿನಿಂದ ಹೊರಬಂದ ಲೆ.ಕರ್ನಲ್ ಶ್ರೀಕಾಂತ್ ಪುರೋಹಿತ್]

ಕೇರಳದಲ್ಲಿನ ಎಡಪಕ್ಷ ಸರ್ಕಾರ ತಮ್ಮ ವಿರೋಧಿಗಳನ್ನು ಬರ್ಬರವಾಗಿ ಹತ್ಯೆ ಮಾಡುತ್ತಿದೆ ಎಂದು ಆರ್.ಎಸ್.ಎಸ್ ಆರೋಪಿಸುತ್ತಲೇ ಬಂದಿದೆ. ಇದೇ ತಿಂಗಳಲ್ಲಿ ಮತ್ತೊಬ್ಬ 34 ವರ್ಷದ ಆರ್.ಎಸ್.ಎಸ್ ಕಾರ್ಯಕರ್ತ ಹತ್ಯೆಯಾಗಿದ್ದರು. ಸಿಪಿಎಂ ಬೆಂಬಲಿಗರು ಆತನ ಕೈಗಳನ್ನು ಕತ್ತರಿಸಿ ಕೊಂದಿದ್ದಾರೆ ಎಂಬ ಆರೋಪಗಳಿವೆ. ಇದರ ಬೆನ್ನಲ್ಲೇ ಮತ್ತೊಬ್ಬ ಆರ್.ಎಸ್.ಎಸ್ ಕಾರ್ಯಕರ್ತ ಹತ್ಯೆಯಾಗಿರುವುದು ಆತಂಕ ಸೃಷ್ಟಿಸಿದೆ.

Loading...