92 ಜನರಿದ್ದ ರಷ್ಯಾ ಮಿಲಿಟರಿ ವಿಮಾನ ಕಪ್ಪು ಸಮುದ್ರದಲ್ಲಿ ಪತನ

92 ಜನರನ್ನು ಹೊತ್ತೊಯ್ಯುತ್ತಿದ್ದ ರಷ್ಯಾ ಸೇನಾ ವಿಮಾನ ಕಪ್ಪು ಸಮುದ್ರದಲ್ಲಿ ಪತನಗೊಂಡಿದೆ. ವಿಮಾನದಲ್ಲಿ ಸಂಗೀತಗಾರರೊಂದಿಗೆ 8 ಅಧಿಕಾರಿಗಳೂ ಇದ್ದರೆಂದು ತಿಳಿದುಬಂದಿದೆ.

ರಷ್ಯಾದಿಂದ ಸಿರಿಯಾದ ಲಟಾಕಿಯಾ ಪ್ರಾಂತ್ಯಕ್ಕೆ ವಿಮಾನ ಹೊರಟಿತ್ತು.ಮುಂಜಾನೆ 5:20 ಕ್ಕೆ ಟೇಕಾಫ್ ಆದ ಟಿಯು 154 ವಿಮಾನ 20 ಕಿ.ಮೀ ಪ್ರಯಾಣಿಸಿದ ನಂತರ ರಾಡಾರ್ ನೊಂದಿಗೆ ಸಂಪರ್ಕ ಕಡಿದುಕೊಂಡಿತು ಎಂದು ರಷ್ಯಾ ರಕ್ಷಣಾ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.

ಕಪ್ಪು ಸಮುದ್ರ ಪ್ರದೇಶದ ಸೋಚಿ ಪ್ರಾಂತ್ಯದಲ್ಲಿ ವಿಮಾನ ಕಣ್ಮರೆಯಾಗಿದೆ ಎನ್ನಲಾಗುತ್ತಿದೆ. ವಿಮಾನದ ಅವಶೇಷಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Related News

Loading...

Leave a Reply

Your email address will not be published.

error: Content is protected !!