russia-plane-crash
Pic: AP

ನೆಲಕ್ಕುರುಳಿದ 71 ಪ್ರಯಾಣಿಕರಿದ್ದ ರಷ್ಯಾ ವಿಮಾನ

ರಷ್ಯಾದಲ್ಲಿ ಭಾರೀ ದುರಂತವೊಂದು ಸಂಭವಿಸಿದೆ. 71 ಜನ ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ವಿಮಾನವೊಂದು ನೆಲಕ್ಕುರುಳಿದೆ. ಸರಟೋವ್ ಏರ್ಲೈನ್ಸ್ ನ ಎಎನ್-148 ವಿಮಾನ ರಷ್ಯಾ ರಾಜಧಾನಿ ಮಾಸ್ಕೋದ ಡೊಮೆಡೆಡೊವೊ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿತ್ತು. ಆದರೆ ಟೇಕಾಫ್ ಆದ ಎರಡೇ ನಿಮಿಷಗಳಲ್ಲಿ ಅರ್ಗುನೊವೊ ಗ್ರಾಮ ಸಮೀಪ ಆಗ್ನೇಯ ಮಾಸ್ಕೋದಿಂದ ಸುಮಾರು 80 ಕಿ.ಮೀ ದೂರದಲ್ಲಿ ನೆಲಕ್ಕುರುಳಿದೆ.

ವಿಮಾನದಲ್ಲಿರುವ ಪ್ರಯಾಣಿಕರು ಹಾಗೂ ಸಿಬ್ಬಂದಿಯೆಲ್ಲರೂ ಮೃತಪಟ್ಟಿರಬಹುದೆಂದು ಅಧಿಕಾರಿಗಳು ಹೇಳಿದ್ದಾರೆ.

ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯಕ್ಕೆ ಶಂಕುಸ್ಥಾಪನೆ

ಟೇಕಾಫ್ ಆದ ಸ್ವಲ್ಪ ಹೊತ್ತಿನ್ಲಲೇ ವಿಮಾನದ ಸಿಗ್ನಲ್ ರೆಡಾರ್ ಗೆ ತಲುಪಿಲ್ಲವೆನ್ನಲಾಗಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿ ಶೋಧ ಕಾರ್ಯ ನಡೆಸುತ್ತಿವೆ. ವಿಮಾನದಲ್ಲಿ 65 ಜನ ಪ್ರಯಾಣಿಕರಿದ್ದು, ಆರು ಜನ ಏರ್ ಲೈನ್ಸ್ ಸಿಬ್ಬಂದಿ ಇದ್ದರು. ದುರಂತದಲ್ಲಿ ಎಲ್ಲರೂ ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ಭಾವಿಸುತ್ತಿದ್ದಾರೆ.

ಕೆಲ ವರದಿಗಳ ಪ್ರಕಾರ ವಿಮಾನವು ಅರ್ಗುನೊವೊ ಗ್ರಾಮದ ಕೆಲವರು ವಿಮಾನವು ಹೊತ್ತಿ ಉರಿಯುತ್ತಾ ನೆಲಕ್ಕುರುಳುತ್ತಿದ್ದನ್ನು ಕಂಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಪ್ರಯಾಣಿಕರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಮತ್ತಷ್ಟು ವಿವರಗಳು ಬರಬೇಕಿದೆ.

Get Latest updates on WhatsApp. Send ‘Subscribe’ to 8550851559