ಶೂಟೌಟ್ ಪ್ರಕರಣ, ಶಾಸಕ ವಿಶ್ವನಾಥ್ ಕಾರಣ : ಕಡಬಗೆರೆ ಶ್ರೀನಿವಾಸ್ – News Mirchi

ಶೂಟೌಟ್ ಪ್ರಕರಣ, ಶಾಸಕ ವಿಶ್ವನಾಥ್ ಕಾರಣ : ಕಡಬಗೆರೆ ಶ್ರೀನಿವಾಸ್

ಬೆಂಗಳೂರು: ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಮಾತನಾಡಿರುವ ಕಡಬಗೆರೆ ಶ್ರೀನಿವಾಸ್, ತಮ್ಮ ಮೇಲಿನ ಗುಂಡಿನ ದಾಳಿಗೆ ಯಲಹಂಕದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಕಾರಣ ಎಂದು ಆರೋಪ ಮಾಡಿದ್ದಾರೆ. ಯಲಹಂಕದ ಕೋಗಿಲು ಕ್ರಾಸ್ ಬಳಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಡಬಗೆರೆ ಶ್ರೀನಿವಾಸ್ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು.  ಶೂಟೌಟ್ ನಡೆದ 2 ವಾರಗಳ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀನಿವಾಸ್ ಈ ಕುರಿತು ಮಾತನಾಡಿದ್ದಾರೆ. ಶೂಟೌಟ್ ಪ್ರಕರಣದಲ್ಲಿ ಎಸ್.ಆರ್.ವಿಶ್ವನಾಥ್ ಹಾಗೂ ಇನ್ನಿಬ್ಬರ ಕೈವಾಡವಿದೆ ಎಂದು ಶ್ರೀನಿವಾಸ್ ಆರೋಪಿಸಿದ್ದಾರೆ.

 

Loading...

Leave a Reply

Your email address will not be published.