5ಜಿ ಸೇವೆಗಳ ಮೂಲಕ ಮತ್ತೊಂದು ಸಂಚಲನಕ್ಕೆ ಜಿಯೋ ಸಿದ್ಧ? – News Mirchi
We are updating the website...

5ಜಿ ಸೇವೆಗಳ ಮೂಲಕ ಮತ್ತೊಂದು ಸಂಚಲನಕ್ಕೆ ಜಿಯೋ ಸಿದ್ಧ?

ಟಿಲಿಕಾಂ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆಯೇ ಸಂಚಲನ ಸೃಷ್ಟಿಸಿ ಇತರೆ ನೆಟ್ವರ್ಕ್ ಗಳಿಗೆ ಭಾರೀ ಹೊಡೆತ ನೀಡಿದ್ದ ರಿಲಯನ್ಸ್ ಜಿಯೋ, ಮತ್ತೊಮ್ಮೆ ಸುದ್ದಿ ಮಾಡುತ್ತಿದೆ. ಈಗಾಗಲೇ ಉಚಿತ ಡಾಟಾ, ಕಾಲಿಂಗ್ ಮತ್ತಿತರ ಕೊಡುಗೆಗಳ ಮೂಲಕ ದಾಖಲೆ ಮಟ್ಟದಲ್ಲಿ ಬಳಕೆದಾರರನ್ನು ಸೆಳೆದ ಜಿಯೋ, ಇದೀಗ ಮತ್ತೊಮ್ಮೆ ಇತರೆ ಟೆಲಿಕಾಂ ಕಂಪನಿಗಳಿಗೆ ಹೊಡೆತ ನೀಡಲು ಸಿದ್ಧವಾಗುತ್ತಿದೆ. ದೇಶದಲ್ಲಿ 5ಜಿ ಸೇವೆಗಳನ್ನು ನೀಡಲು ಎಲೆಕ್ಟ್ರಾನಿಕ್ ದಿಗ್ಗಜ ಕಂಪನಿ ಸ್ಯಾಮ್ಸಂಗ್ ಜೊತೆ ಕೈಜೋಡಿಸಿದೆ. ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2017 ನಲ್ಲಿ ಕ್ಲೋಸ್ಡ್ ಈವೆಂಟ್ ಒಂದರಲ್ಲಿ ಈ ಒಪ್ಪಂದ ಮಾಡಿಕೊಂಡಿವೆ. ಸ್ಯಾಮ್ಸಂಗ್ 5ಜಿ ಸೇವೆಗಳ ಹೋಂ ರೂಟರ್, ರೇಡಿಯೋ ಬೇಸ್ ಸ್ಟೇಷನ್, 5 ಜಿ ಮೋಡಮ್ ಚಿಪ್ ಸೆಟ್ ಗಳನ್ನು ಇದೇ ಅಧಿವೇಶನದಲ್ಲಿ ಬಿಡುಗಡೆ ಮಾಡಿದೆ.

ಕಳೆದ ವಾರ ಜಿಯೋ ಪ್ರಕಟಿಸಿದ ಪ್ರೈಂ ಮೆಂಬರ್ಷಿಪ್ ಯೋಜನೆಯ ಹೊಸ ಜಿಯೋ ಗ್ರಾಹಕರಿಗೆ ಶೀಘ್ರದಲ್ಲೇ 5ಜಿ ಸೇವೆಗಳನ್ನು ನೀಡಲು ಅನುಕೂಲವಾಗಲಿದೆ. ಮುಖ್ಯವಾಗಿ ಹ್ಯಾಪಿ ನ್ಯೂ ಇಯರ್ ಆಫರ್ ಅವಧಿ ಶೀಘ್ರದಲ್ಲಿ ಮುಗಿಯಲಿರುವುದರಿಂದ ಎಪ್ರಿಲ್ ನಿಂದ ಹೊಸ ದರಗಳನ್ನು ಜಾರಿಗೆ ತರಲಿದೆ. ತನ್ನ ಪ್ರೈಮ್ ಗ್ರಾಹಕರಿಗೆ ಅನಿಯಮಿತ ಕೊಡುಗೆಗಳ ಲಾಭವನ್ನು ಮಾರ್ಚ್ 31, 2018 ರವರೆಗೂ ನೀಡಲು ಅನುಕೂಲವಾಗುವಂತೆ ಹೊಸ ಪ್ರೋತ್ಸಾಹಕಗಳನ್ನು ತರುವುದಾಗಿ ರಿಲಯಬ್ಸ್ ಚೇರ್ಮನ್ ಮುಖೇಶ್ ಅಂಬಾನಿ ಹೇಳಿದ್ದಾರೆ. ಜಿಯೋ ಟಿವಿ, ಜಿಯೊ ಮ್ಯೂಸಿಕ್, ಜಿಯೋ ಮ್ಯಾಗ್, ಜಿಯೋ ಸಿನಿಮಾ, ಜಿಯೋ ಎಕ್ಸ್ ಪ್ರೆಸ್ ನಂತಹ ಮೀಡಿಯಾ ಸೇವೆಗಳನ್ನು ನೀಡಲಿದೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!