ಚಿತ್ರ ಕೃಪೆ: ಪಬ್ಲಿಕ್ ಟಿವಿ

ಯುವಕನ ಕೈಕಟ್ಟಿ ಜೆಡಿಎಸ್ ಶಾಸಕನ ಪುತ್ರನಿಂದ ಹಲ್ಲೆ, ತಡವಾಗಿ ಬೆಳಕಿಗೆ ಬಂದ ವೀಡಿಯೋ

ಯುವಕನೊಬ್ಬನ ಕೈ ಕಟ್ಟಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಪುತ್ರ ಮನಸೋಇಚ್ಛೆ ಥಳಿಸುತ್ತಿರುವ ವೀಡಿಯೋ ಒಂದು ಹರಿದಾಡುತ್ತಿದೆ. ಜೆಡಿಎಸ್ ಪುತ್ರ ನಾಲ್ವರೊಂದಿಗೆ ಸೇರಿ ಯುವಕನ ಮೇಲೆ ಹಲ್ಲೆ ನಡೆಸಿರುವುದು ಈ ವೀಡಿಯೋದಲ್ಲಿದೆ.

ಜೆಡಿಎಸ್ ಶಾಸಕ ಸಾ.ರಾ.ಮಹೇಶ್

ವೀಡಿಯೋ ರೆಕಾರ್ಡ್ ಆಗುತ್ತಿರುವುದು ಶಾಸಕರ ಪುತ್ರ ಜಯಂತ್ ಗಮನಕ್ಕೆ ಬಂದಿದ್ದರೂ ಕೂಡಾ ಹಲ್ಲೆ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ತನ್ನನ್ನು ಬಿಟ್ಟುಬಿಡುವಂತೆ ಪರಿಪರಿಯಾಗಿ ಬೇಡಿಕೊಂಡರೂ ಕೇಳದ ಜಯಂತ್ ಹಲ್ಲೆ ನಡೆಸಿದ್ದಾನೆ.

ಘಟನೆ ಸುಮಾರು ಒಂದು ವರ್ಷದ ಹಿಂದೆ ನಡೆದಿದೆ ಎನ್ನಲಾಗುತ್ತಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ನಡೆದು ಇಷ್ಟು ದಿನದ ನಂತರ ವೀಡಿಯೋ ಬಹಿರಂಗ ಮಾಡಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಮಾತುಗಳೂ ಕೇಳಿ ಬರುತ್ತಿವೆ.

Get Latest updates on WhatsApp. Send ‘Add Me’ to 8550851559