ಬಿಬಿಸಿ ಪ್ರಭಾವಿ ಮಹಿಳೆಯರು: ಸಾಲುಮರದ ತಿಮ್ಮಕ್ಕ, ಸನ್ನಿಲಿಯೋನ್ ಗೆ ಸ್ಥಾನ

ಬಿಬಿಸಿ ಈ ವರ್ಷ ಹೊರತಂದಿರುವ 100 ಜನ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಕರ್ನಾಟಕದ ಸಾಲು ಮರದ ತಿಮ್ಮಕ್ಕ, ನಟಿ ಸನ್ನಿ ಲಿಯೋನ್ ಸ್ಥಾನ ಪಡೆದಿದ್ದಾರೆ.

71479844258_625x300ವ್ಯಾಪಾರ, ಕ್ರೀಡೆ, ಫ್ಯಾಷನ್, ಕಲೆ, ಇಂಜಿನಿಯರಿಂಗ್ ಮುಂತಾದ ವಿವಿಧ ಕ್ಷೇತ್ರಗಳಲ್ಲಿನ ಮಹಿಳೆಯರನ್ನು ಒಳಗೊಂಡ ಪಟ್ಟಿಯನ್ನು ಬಿಬಿಸಿ ಬಿಡುಗಡೆ ಮಾಡಿದೆ. ಇವರ ಜೊತೆ ಇನ್ನೂ ಮೂವರು ಭಾರತೀಯ ಮಹಿಳೆಯರು ಈ ಪಟ್ಟಿಯಲ್ಲಿದ್ದಾರೆ.

ಗೌರಿ ಚಿಂದಾರ್ಕರ್(ಸಾಂಗ್ಲಿ, ಮಹಾರಾಷ್ಟ್ರ), ಮಲ್ಲಿಕಾ ಶ್ರೀನಿವಾಸನ್(ಚೆನ್ನೈ), ನೇಹಾ ಸಿಂಗ್(ಮುಂಬೈ) ಪಟ್ಟಿಯಲ್ಲಿ ಸ್ಥಾನ ಪಡೆದ ಇತರ ಮೂವರು.

ಸಾಲು ಮರದ ತಿಮ್ಮಕ್ಕ 80 ವರ್ಷಗಳಲ್ಲಿ 8 ಸಾವಿರಕ್ಕೂ ಹೆಚ್ಚು ಗಿಡ ನೆಟ್ಟು ಪ್ರಸಿದ್ಧರಾಗಿದ್ದು, ಬಿಬಿಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿಯೇ ಹಿರಿಯ ವಯಸ್ಸಿನವರಾಗಿದ್ದಾರೆ. ಟ್ರಾಕ್ಟರ್ ಕ್ವೀನ್ ಎಂದೇ ಹೆಸರುವಾಸಿಯಾಗಿರುವ ಮಲ್ಲಿಕಾ ‘ಟ್ರ್ಯಾಕ್ಟರ್ ಅಂಡ್ ಫಾರ್ಮ್ ಎಕ್ವಿಪ್ಮೆಂಟ್ ಲಿಮಿಟೆಡ್’ ಕಂಪನಿಯ ಸಿಇಒ. ನೇಹಾ ನಟಿ, ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆ.

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache