ಕೇರಳ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಸಚಿನ್

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್ ಭೇಟಿಯಾದರು. ಇದೇ ತಿಂಗಳು 17 ರಿಂದ ಕೊಚ್ಚಿಯಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಟೂರ್ನಿ ಪ್ರಾರಂಭ ಕಾರ್ಯಕ್ರಮಕ್ಕೆ ಬರುವಂತೆ ಸಚಿನ್ ಆಹ್ವಾನಿಸಿದರು.

ಟೂರ್ನಿಯ ಮೊದಲ ಪಂದ್ಯ 17 ರಂದು ಕೇರಳ ಮತ್ತು ಕೋಲ್ಕತಾ ನಡುವೆ ನಡಯಲಿದೆ. ಕೇರಳ ತಂಡಕ್ಕೆ ಸಚಿನ್ ಮಾಲೀಕರಾಗಿದ್ದಾರೆ.

ಈ ತಿಂಗಳು 17 ರಂದು ಕೊಚ್ಚಿಯಲ್ಲಿ ಕೋಲ್ಕತಾ ಮತ್ತು ಕೇರಳ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ. ಆರಂಭದ ಕಾರ್ಯಕ್ರಮಕ್ಕೆ ಕೇರಳ ಮುಖ್ಯಮಂತ್ರಿಯನ್ನು ಆಹ್ವಾನಿಸಿದ್ದೇವೆ ಎಂದು ಸಿಎಂ ಭೇಟಿ ನಂತರ ಸಚಿನ್ ಹೇಳಿದರು.

Related News