ಪ್ರಧಾನಿ ಮೋದಿಗೆ ಥ್ಯಾಂಕ್ಸ್ ಹೇಳಿದ ಸಚಿನ್

ಪ್ರತಿ ವಿದ್ಯಾರ್ಥಿ ಇತರರೊಂದಿಗೆ ಮಾತ್ರವಲ್ಲದೆ ತನ್ನೊಂದಿಗೆ ತಾನು ಸ್ಪರ್ಧೆಗೆ ಇಳಿಯಬೇಕು, ಆಗಲೇ ಜೀವನದಲ್ಲಿ ಮೇಲೆ ಬರಲು ಸಾಧ್ಯ ಎಂದು ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದರು. ಈ ಸಂದರ್ಭದಲ್ಲಿ ಉದಾಹರಣೆಯಾಗಿ ಸಚಿನ್ ತೆಂಡೂಲ್ಕರ್ ಅವರ ಯಶಸ್ಸುಗಳನ್ನು ಪ್ರಸ್ತಾಪಿಸಿದ್ದರು.

ಪ್ರಧಾನಿಯವರ ಭಾಷಣದಲ್ಲಿ ತಮ್ಮ ಹೆಸರನ್ನು ಪ್ರಸ್ತಾಪ ಮಾಡಿ, ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿ ಹೇಳಿದ ಪ್ರಧಾನಿ ಮೋದಿಯವರಿಗೆ ಸಚಿನ್ ತೆಂಡೂಲ್ಕರ್ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಕ್ರೀಡಾಕಾರನಾದರೂ, ವಿದ್ಯಾರ್ಥಿಯಾದರೂ ಶ್ರಮ ಅಗತ್ಯ ಎಂದು ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.