ಸಚಿನ್‌ ರನ್ನು ಕಿಡ್ನ್ಯಾಪ್ ಮಾಡಬೇಕು: ಇಂಗ್ಲೆಂಡ್ ಮಾಜಿ ಪ್ರಧಾನಿ

ನವದೆಹಲಿ: ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಒದ್ದಾಡುತ್ತಿರುವ ಇಂಗ್ಲೆಂಡ್, ಆ ಕಷ್ಟಗಳಿಂದ ಹೊರಬರಲು ಇಂಗ್ಲೆಂಡ್ ನ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಗೆ ಒಂದೊಳ್ಳೆ ಉಪಾಯ ಹೊಳೆದಿದೆ. ಅದು ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಕಿಡ್ನಾಪ್ ಮಾಡಿ ಇಂಗ್ಲೆಂಡ್ ಆಟಗಾರರಿಗೆ ತರಬೇತಿ ನೀಡುವುದು!

ಹೌದು ಭಾರತದ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಇಂಗ್ಲೆಂಡ್ ವಿಫಲವಾಲವಾತ್ತಿರುವುದನ್ನು ನೋಡಿ ಕ್ಯಾಮರೂನ್ ಹೀಗೆ ಜೋಕ್ ಮಾಡಿದ್ದಾರೆ.

ಟಸ್ಟ್ ಸರಣಿಯಲ್ಲಿ ಸದ್ಯದ ಪರಿಸ್ಥಿತಿ ಗಮನಿಸುತ್ತಿದ್ದರೆ, ಸಚಿನ್ ರನ್ನು ಕಿಡ್ನ್ಯಾಪ್ ಮಾಡುವುದು ಬಿಟ್ಟರೆ ಬೇರೆ ಮಾರ್ಗ ಕಾಣಿಸುತ್ತಿಲ್ಲ. ತೆಂಡೂಲ್ಕರ್ ಅವರಿಂದ ತರಬೇತಿ ಕೊಡಿಸಿದರೆ, ಇಂಗ್ಲೆಂಡ್ ತಂಡ ಚೇತರಿಸಿಕೊಳ್ಳುತ್ತದೆ ಎನಿಸುತ್ತಿದೆ. ನಾನು ಭಾರತಕ್ಕೆ ಬಂದಾಗಲೆಲ್ಲಾ ಇಲ್ಲಿ ಕ್ರಿಕೆಟ್ ಬೆಳವಣಿಗೆಯನ್ನು ಗಮನಿಸುತ್ತಿರುತ್ತೇನೆ ಎಂದು ಕ್ಯಾಮರೂನ್ ಹೇಳಿದರು.

ಕ್ರಿಕೆಟ್ ಅನ್ನು ಪ್ರೀತಿಸುವ ಕ್ಯಾಮರೂನ್, ಶನಿವಾರ ನಡೆದ ಹಿಂದೂಸ್ಥಾನ್ ಟೈಮ್ಸ್ ಲೀಡರ್ಶಿಪ್ ಸಮ್ಮಿಟ್ ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕ್ಯಾಮರೂನ್ ಮತ್ತು ಸಚಿನ್ ಮುಖಾಮುಖಿಯಾದರು. ಈ ವೇಳೆ ಈ ತಮಾಷೆಯ ಸಂಭಾಷಣೆ ನಡೆಯಿತು.