ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಪಿಂಕ್ ಬಸ್ ಸೇವೆ – News Mirchi

ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಪಿಂಕ್ ಬಸ್ ಸೇವೆ

ಉತ್ತರ ಪ್ರದೇಶ ಸರ್ಕಾರ ಮಹಿಳೆಯರಿಗೆ ವಿಶೇಷವಾಗಿ ಹವಾನಿಯಂತ್ರಿತ ಪಿಂಕ್ ಬಸ್ ಸೇವೆಯನ್ನು ಶೀಘ್ರದಲ್ಲೇ ಆರಂಭಿಸುವುದಾಗಿ ಹೇಳಿದೆ. ಮಹಿಳೆಯರಿಗಾಗಿ 50 ಬಸ್ ಗಳ ಖರೀದಿ ಉದ್ದೇಶಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ನಿರ್ಭಯಾ ನಿಧಿಯಿಂದ ಹಣ ಬಿಡುಗಡೆ ಮಾಡಿದೆ. ಈ ಬಸ್ ಗಳ ವಿಶೇಷತೆಯೆಂದರೆ ಕಂಡಕ್ಟರ್ ಸೇರಿದಂತೆ  ಎಲ್ಲಾ ಸಿಬ್ಬಂದಿ ಮಹಿಳೆಯರಾಗಿರುವರು.

ಬಸ್ಸುಗಳಲ್ಲಿ ತುರ್ತು ಸಂದರ್ಭಗಳಲ್ಲಿ ಅನುಕೂಲವಾಗುವಂತೆ ಪಿಂಕ್ ಬಟನ್ ಕೂಡಾ ಅಳವಡಿಸಲಾಗುತ್ತದೆ. ಇದರ ಜೊತೆ ರಾಜ್ಯದ 12,500 ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಕೇಂದ್ರ ಸೂಚಿಸಿದೆ..

Loading...