ಹಜ್ ಯಾತ್ರಿಕರಿಗೆ ಹಡಗು ಪ್ರಯಾಣ, ಮತ್ತಷ್ಟು ಸೌಲಭ್ಯಗಳು – News Mirchi

ಹಜ್ ಯಾತ್ರಿಕರಿಗೆ ಹಡಗು ಪ್ರಯಾಣ, ಮತ್ತಷ್ಟು ಸೌಲಭ್ಯಗಳು

ಹಜ್ ಯಾತ್ರಿಕರಿಗೆ ಹಡಗು ಪ್ರಯಾಣ ಸೌಲಭ್ಯ ಕಲ್ಪಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಇದಕ್ಕೆ ಸಂಬಂಧಿಸಿದಂತೆ ನೌಕಾಯಾನ ಸಚಿವಾಲಯದೊಂದಿಗೆ ಚರ್ಚೆ ನಡೆಸುತ್ತಿದೆ. 1994 ರವರೆಗೂ ಹಜ್ ಯಾತ್ರೆಗೆ ಜಲಮಾರ್ಗದ ಮೂಲಕವೇ ಮುಸ್ಲಿಮರು ತೆರಳುತ್ತಿದ್ದರು, ಆಗ ಒಂದು ಹಡಗಿನಲ್ಲಿ ಒಮ್ಮೆಗೆ ಸುಮಾರು 2 ಸಾವಿರ ಜನ ಯಾತ್ರಿಕರು ಪ್ರಯಾಣ ಮಾಡುವ ಅವಕಾಶ ಇತ್ತು.

ಮುಂದಿನ ವರ್ಷದಿಂದ ಹೊಸ ಹಜ್ ನೀತಿ ಬರಲಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಹಜ್ ಯಾತ್ರೆಗೆ ಕೇಂದ್ರ ಸರ್ಕಾರ ಜಾರಿಗೆ ತರುವ ಹೊಸ ನೀತಿಯಿಂದ ಯಾತ್ರಿಕರಿಗೆ ಖರ್ಚು ಕಡಿಮೆಯಾಗುತ್ತದೆ. ಅದರ ಜೊತೆಗೆ ಯಾತ್ರಿಕರಿಗೆ ಮತ್ತಷ್ಟು ಸೌಲಭ್ಯಗಳು ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ಇನ್ನೂ ಹೆಚ್ಚಿನ ವಿವರಗಳು ಈಗಲೇ ಹೇಳಲಾರೆ ಎಂದು ಅವರು ಹೇಳಿದರು.

ತೆಲಂಗಾಣ ರಾಜ್ಯ ಹಜ್ ಕಮಿಟಿ ನೇತೃತ್ವದಲ್ಲಿ ಶನಿವಾರ ಹೈದರಾಬಾದಿನ ನಾಂಪಲ್ಲಿ ಹಜ್ ಹೌಸ್ ನಲ್ಲಿ ಹಜ್ ಯಾತ್ರೆಗೆ ಆಯ್ಕೆಯಾದವರಿಗೆ ಲಸಿಕೆ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡುತ್ತಿದ್ದರು. ಭಾರತದ ಹಜ್ ಯಾತ್ರಿಕರ ಕೋಟಾವನ್ನು ಸೌದಿ ಅರೇಬಿಯಾ ಸರ್ಕಾರ 1.70 ಲಕ್ಷಕ್ಕೆ ಏರಿಸಿದೆ ಎಂದು ನಖ್ವಿ ತಿಳಿಸಿದರು. 2012 ರಲ್ಲಿ 1.70 ಲಕ್ಷದಷ್ಟಿದ್ದ ಕೋಟಾವನ್ನು 1.36ಲಕ್ಷಕ್ಕೆ ಸೌದಿ ಅರೇಬಿಯಾ ಇಳಿಸಿತ್ತು.

Click for More Interesting News

Loading...
error: Content is protected !!