ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ಸಲ್ಮಾನ್ ಖುಲಾಸೆ – News Mirchi

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ಸಲ್ಮಾನ್ ಖುಲಾಸೆ

ಹದಿನೆಂಟು ವರ್ಷಗಳ ಹಿಂದಿನ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಬಾಲಿವುಡ್ ಮಟ ಸಲ್ಮಾನ್ ಖಾನ್ ನನ್ನು ಜೋಧ್ ಪುರ ನ್ಯಾಯಾಲಯ ಖುಲಾಸೆಗೊಳಿಸಿದೆ. ಪರವಾನಗಿ ಅವಧಿ ಮುಗಿದರೂ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದರೆಂದು, ಅವುಗಳನ್ನು ಬಳಸಿದಂತೆ ಹೇಳುವ ಯಾವುದೇ ಸೂಕ್ತ ಸಾಕ್ಷಿಗಳು ಇಲ್ಲದ ಕಾರಣ ಬುಧವಾರ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನಿರಪರಾಧಿ ಎಂದು ತೀರ್ಪು ನೀಡಿದರು.

ಸಲ್ಮಾನ್ ವಿರುದ್ಧ ಇರುವ 4 ಪ್ರಕರಣಗಳಲ್ಲಿ ಅಕ್ರಮ ಶಸ್ತ್ರಾಸ್ತ್ರ ಪ್ರಕರಣವೂ ಒಂದು. ಎರಡು ಕೃಷ್ಣಮೃಗಗಳ ಭೇಟೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಇನ್ನೂ ಮುಂದುವರೆಯುತ್ತಿದೆ. ಇದೆ ತಿಂಗಳು 25 ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಹಾಜರಾಗಲಿದ್ದಾರೆ.

Loading...

Leave a Reply

Your email address will not be published.