ಈ ಸ್ಯಾಮ‍್ಸಂಗ್ ಮೊಬೈಲ್ ದರದಲ್ಲಿ ರೂ. 5,000 ಕಡಿತ

ಈ ವರ್ಷಾರಂಭದಲ್ಲಿ ಸ್ಯಾಮ್ಸಂಗ್ ಕಂಪನಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ “ಗ್ಯಾಲಾಕ್ಷಿ ಸಿ9 ಪ್ರೊ” ಸ್ಮಾರ್ಟ್ ಫೋನ್ ದರ ಕಡಿತ ಮಾಡಿದೆ. ತನ್ನ ಸ್ವಂತ ಆನ್ಲೈನ್ ಸ್ಟೋರ್ ಮತ್ತು ಇ-ಕಾಮರ್ಸ್ ದಿಗ್ಗಜ ಫ್ಲಿಪ್ ಕಾರ್ಟ್ ನಲ್ಲಿ ಈ ಸ್ಮಾರ್ಟ್ ಫೋನ್ ಈಗ 31,900 ಕ್ಕೆ ಲಭ್ಯವಾಗುತ್ತಿದೆ.

ಬಿಡುಗಡೆಗೊಂಡಾಗಿ ಈ ಸ್ಮಾರ್ಟ್ ಫೋನ್ ದರ ರೂ.36,900 ಆಗಿತ್ತು. ಸ್ಯಾಮ್ಸಂಗ್ ನಿಂದ ಬಿಡುಗಡೆಗೊಂಡ ಮೊಟ್ಟ ಮೊದಲ 6 ಜಿಬಿ ರ‍್ಯಾಮ್ ಹೊಂದಿರು ಮೊಬೈಲ್ ಇದಾಗಿದೆ. ಮೊದಲು ಕಳೆದ ಅಕ್ಟೋಬರ್ ನಲ್ಲಿ ಈ ಸ್ಮಾರ್ಟ್ ಫೋನ್ ಚೀನಾದಲ್ಲಿ ಬಿಡುಗಡೆಯಾಗಿತ್ತು. ನಂತರ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾಗಿತ್ತು. ಇದೀಗ ಯಾವುದೇ ಅಧಿಕೃತ ಪ್ರಕಟಣೆಯಿಲ್ಲದೆ ಕಂಪನಿಯು ಈ ಸ್ಮಾರ್ಟ್ ಫೋನ್ ದರವನ್ನು 5000 ರೂಗಳಷ್ಟು ಕಡಿಮೆ ಮಾಡಿದೆ. ರೂ. 31,900 ಕ್ಕೆ ತನ್ನ ಆನ್ಲೈನ್ ಸ್ಟೋರ್ ನಲ್ಲಿ ಮಾರಾಟ ಮಾಡುತ್ತಿದೆ. ಈ ಸ್ಮಾರ್ಟ್ ಫೋನ್ ಈಗಾಗಲೇ ಫ್ಲಿಪ್ ಕಾರ್ಟ್ ನಲ್ಲಿ ಹೊಸ ದರದಲ್ಲಿ ಲಭ್ಯವಿದೆ. ಬ್ಲಾಕ್, ಗೋಲ್ಡ್ ಬಣ್ಣಗಳಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿದೆ.

ಗ್ಯಾಲಾಕ್ಸಿ ಸಿ9 ಪ್ರೊ ವೈಶಿಷ್ಟ್ಯಗಳು…

ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ)
ಆಂಡ್ರಾಯ್ಡ್ 6.0 ಮಾರ್ಷ್ ಮಾಲೋ
6 ಇಂಚಿನ ಫುಲ್ ಹೆಚ್.ಡಿ ಅಮೋಲ್ಡ್ ಡಿಸ್‍ಪ್ಲೇ
ಆಕ್ವಾ ಕೋರ್ ಕ್ವಾಲ್ ಕಾಮ್ ಸ್ನ್ಯಾಪ್ ಡ್ರ್ಯಾಗನ್ 653 ಎಸ್ಒಸಿ
16 ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ ಮತ್ತು ಫ್ರಂಟ್ ಕ್ಯಾಮೆರಾ
6 ಜಿಬಿ ರ‍್ಯಾಮ್
64 ಜಿಬಿ ಇಂಟರ್ನಲ್ ಸ್ಟೋರೇಜ್
256 ಜಿಬಿ ವರೆಗೂ ವಿಸ್ತರಿಸಬಲ್ಲ ಮೆಮೊರಿ
4000 ಎಂಎಹೆಚ್ ಬ್ಯಾಟರಿ ಸಾಮರ್ಥ್ಯ
189 ಗ್ರಾಂ ತೂಕ.