ಸ್ಯಾಮ್ಸಂಗ್ ಗ್ಯಾಲಾಕ್ಸಿ ಜೆ1(4ಜಿ), ಬೆಲೆ 6,890

ಸ್ಯಾಮ್ಸಂಗ್ ಭಾರತದಲ್ಲಿ ಶುಕ್ರವಾರ ಹೊಸ ಬಜೆಟ್ 4G ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಸ್ಯಾಮ್ಸಂಗ್ ಗ್ಯಾಲಾಕ್ಸಿ J1 (4G) ಹೆಸರಿನ ಈ ಸ್ಮಾರ್ಟ್ ಫೋನ್ ನ ಬೆಲೆ ರೂ.6,890. ಈ ಸ್ಮಾರ್ಟ್ಫೋನ್ ಶೀಘ್ರದಲ್ಲೇ ದೇಶದ ಎಲ್ಲಾ ರೀಟೇಲ್ ಮಳಿಗೆಗಳಲ್ಲಿ ಖರೀದಿಸಲು ಲಭ್ಯವಾಗುತ್ತದೆ. ಗೋಲ್ಡ್, ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ.

ಡ್ಯುಯಲ್ ಸಿಮ್ ಹೊಂದಿರುವ ಇದು ಆಂಡ್ರಾಯ್ಡ್ 5.1 ಲಾಲಿಪಾಪ್ ಸ್ಮಾರ್ಟ್ಫೋನ್. 4.5 ಇಂಚು ಸೂಪರ್ ಅಮೋಲ್ಡ್ ಡಿಸ್‌ಪ್ಲೇ, 1.3GHz ಕ್ವಾಡ್ ಕೋರ್ ಪ್ರೊಸೆಸರ್, 1ಜಿಬಿ ರ‌್ಯಾಮ್ ಹೊಂದಿದೆ.

5 ಮೆಗಾ ಪಿಕ್ಸೆಲ್ ಆಟೋ ಫೋಕಸ್, ಎಲ್‌ಇಡಿ ಫ್ಲ್ಯಾಷ್ ಹೊಂದಿರುವ ಹಿಂಬದಿ ಕ್ಯಾಮೆರಾ. 2 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ. 8 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಸ್ಮಾರ್ಟ್ ಫೋನ್ ತೂಕ 131 ಗ್ರಾಂ.

ಈ ಸ್ಮಾರ್ಟ್ ಫೋನ್ 4ಜಿ ಎಲ್‌ಟಿಇ ಜೊತೆಗೆ ವೋಲ್ಟ್ ಫೀಚರ್ ಹೊಂದಿದೆ. ಇನ್ನು ಬ್ಯಾಟರಿ ವಿಷಯಕ್ಕೆ ಬಂದರೆ, 2050 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.