ಒಡೆಯದು, ನೆನೆಯದು… ಸ್ಯಾಮ್ಸಂಗ್ ನ ಹೊಸ ಸ್ಮಾರ್ಟ್ ಫೋನ್ – News Mirchi

ಒಡೆಯದು, ನೆನೆಯದು… ಸ್ಯಾಮ್ಸಂಗ್ ನ ಹೊಸ ಸ್ಮಾರ್ಟ್ ಫೋನ್

ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್-8 ಸರಣಿಯಲ್ಲಿ ಮತ್ತೊಂದು ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ಎಸ್-8 ಆಕ್ಟೀವ್ ಸ್ಮಾರ್ಟ್ ಫೋನ್ ಅನ್ನು ಸೋಮವಾರ ಬಿಡುಗಡೆ ಮಾಡಿತು. ಮುಂಗಡ ಬುಕಿಂಗ್ ಮೂಲಕ ಸದ್ಯ ಎಟಿ ಅಂಡ್ ಟಿ ಮೂಲಕ ಖರೀದಿಸಬಹುದು. ಆಗಸ್ಟ್ 11 ರಿಂದ ಎಲ್ಲಾ ರೀಟೇಲ್ ಮಳಿಗೆಗಳಲ್ಲೂ ಲಭ್ಯವಿರುತ್ತದೆ. ಇದರ ಬೆಲೆ ರೂ.54 ಸಾವಿರ.

ಅಷ್ಟೇ ಅಲ್ಲದೆ ಎಟಿ ಅಂಡ್ ಟಿ ಕ್ಯಾರಿಯರ್ ಪ್ರೊವೈಡರ್ ಗ್ರಾಹಕರನ್ನು ಆಕರ್ಷಿಸಲು ಕೆಲ ದಿನಗಳ ಕಾಲ ಕೆಲ ಕೊಡುಗೆಗಳನ್ನೂ ನೀಡಲಿದೆ. ಉದಾಹರಣೆಗೆ, ಗ್ರಾಹಕರು ಗ್ಯಾಲಾಕ್ಸಿ ಎಸ್-8 ಆಕ್ಟೀವ್ ಜೊತೆಗೆ ಸ್ಯಾಮ್ಸಂಗ್ ಟಿವಿಯನ್ನೂ ಆನ್ಲೈನ್ ನಲ್ಲೇ ಖರೀದಿಸಿದರೆ ರೂ.32 ಸಾವಿರ ಕಡಿತದೊಂದಿಗೆ ಡೈರೆಕ್ಟ್ ಟಿವಿ ಕನೆಕ್ಷನ್. ಎಕ್ಸ್’ಚೇಂಜ್ ಮೂಲಕ ಸುಮಾರು ರೂ.12,700 ವರೆಗೂ ರಿಯಾಯಿತಿ ಇರುತ್ತದೆ. ಶಟ್ಟರ್ ಪ್ರೂಫ್ ಸ್ಕ್ರೀನ್ (ಐದು ಅಡಿ ಎತ್ತರದಿಂದ ಬಿದ್ದರೂ ಒಡೆಯುವುದಿಲ್ಲ) ಮಿಲಿಟರೀ ಗ್ರೇಡ್ ಶೀಲ್ಡಿಂಗ್, ಡಸ್ಟ್ ಅಂಡ್ ವಾಟರ್ ರೆಸಿಸ್ಟೆಂಟ್ (5 ಅಡಿ ಆಳದ ನೀರಿನಲ್ಲಿ ಬಿದ್ದರೂ ಹಾಳಾಗದು) ಹೈಲೈಟಾಗಿದೆ.

{ಕನ್ನಡವೇ ಸತ್ಯ ಫೇಸ್ಬುಕ್ ಗ್ರೂಪ್ ಸೇರಲು ಕ್ಲಿಕ್ ಮಾಡಿ}

ಗ್ಯಾಲಾಕ್ಸಿ ಎಸ್ 8 ಆಕ್ಟೀವ್
5.80 ಇಂಚಿನ ಸೂಪರ್ ಅಮೋಲ್ಡ್ ಡಿಸ್ ಪ್ಲೇ, 1440×2560 ಪಿಕ್ಸೆಲ್ಸ್ ರೆಸಲ್ಯೂಷನ್, ಆಂಡ್ರಾಯ್ಡ್ ನೌಗಟ್, 12 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ, 8 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ, 4 ಜಿಬಿ ರ್ಯಾಮ್, 64 ಜಿಬಿ ಇಂಟರ್ನಲ್ ಸ್ಟೋರೇಜ್, 256 ಜಿಬಿ ವಿಸ್ತರಿಸಬಲ್ಲ ಸಾಮರ್ಥ್ಯ, 4000 ಎಂಎಹೆಚ್ ಬ್ಯಾಟರಿ ಸಾಮರ್ಥ್ಯವಿದೆ

Loading...