ಜೇಬಿನಲ್ಲೇ ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ಸ್ಪೋಟ – News Mirchi

ಜೇಬಿನಲ್ಲೇ ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ಸ್ಪೋಟ

ಸ್ಯಾಮ್ಸಂಗ್ ಕಂಪನಿಯ ಸ್ಮಾರ್ಟ್ ಫೋನ್ ಒಂದು ಮತ್ತೆ ಸ್ಪೋಟಗೊಂಡಿದೆ. ಆದರೆ ಈ ಹಿಂದೆ ನಡೆದಂತೆ ಚಾರ್ಜಿಂಗ್ ನಲ್ಲಿರುವಾಗ ಅಥವಾ ಫೋನ್ ನಲ್ಲಿ ಮಾತನಾಡುತ್ತಿರುವಾಗ ಈ ಘಟನೆ ನಡೆದಿಲ್ಲ, ಬದಲಿಗೆ ಜೇಬಿನಲ್ಲಿ ಇಡುತ್ತಿರುವಂತೆಯೇ ಸ್ಪೋಟಗೊಂಡಿದೆ. ಈ ಫೋನ್ ಸ್ಪೋಟಗೊಂಡ ವೀಡಿಯೋ ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಈ ಬಾರಿ ಸ್ಪೋಟಗೊಂಗಡಿದ್ದು ಗ್ಯಾಲಾಕ್ಸಿ ನೋಟ್ 7 ಅಲ್ಲ, ಸ್ಯಾಮ್ಸಂಗ್ ಗ್ರ್ಯಾಂಡ್ ಡ್ಯುಯೋಸ್ ಸ್ಮಾರ್ಟ್ ಫೋನ್. ಡೈಲಿ ಮೇಲ್ ವರದಿ ಪ್ರಕಾರ, 47 ವರ್ಷದ ಹೋಟೆಲ್ ಸೂಪರ್ ವೈಸರ್ ಯುಲಿಯಾನ್ಟೋ ಎಂಬಾತ ಇಂಡೋನೇಷ್ಯಾದಲ್ಲಿನ ಹೋಟೆಲೊಂದರ ಲಾಬಿಯಲ್ಲಿದ್ದ. ಇದ್ದಕ್ಕಿದ್ದಂತೆ ಜೇಬಿನಲ್ಲಿ ಬಿಸಿಯಾದಂತೆ ಕಂಡುಬಂದಿದೆ. ನಂತರ ಇದ್ದಕ್ಕಿದ್ದಂತೆ ಜೇಬಿನಲ್ಲಿಯೇ ಆ ಸ್ಮಾರ್ಟ್ ಫೋನ್ ಸ್ಪೋಟಗೊಂಡಿದೆ. ಕೂಡಲೇ ಆ ಬೆಂಕಿ ಆತನ ಅಂಗಿಗೆ ತಗುಲಿದೆ. ನಂತರ ಆ ಕೋಣೆಯಲ್ಲಾ ಹೊಗೆ ಆವರಿಸಿತು.

ಘಟನೆಯಲ್ಲಿ ಯುಲಿಯಾನ್ಟೋ ಮುಖಕ್ಕೆ ಗಾಯಗಳಾಗಿವೆ. ಈ ಶಾಕ್ ನಿಂದ ಹೊರಬಂದು ಕೂಡಲೇ ಅಂಗಿ ಬಿಚ್ಚಿ ಎಸೆದಿದ್ದಾಗಿ ಯುಲಿಯಾನ್ಟೋ ಹೇಳಿದ್ದಾನೆ. ಈ ಘಟನೆ ಸೆಪ್ಟೆಂಬರ್ 30 ರಂದು ನಡೆದಿದ್ದು, ಇದೆಲ್ಲಾ ಆ ಹೋಟೆಲ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಯಾಮ್ಸಂಗ್ ಈ ಫೋನ್ ಅನ್ನು 2013 ರಲ್ಲಿ ಬಿಡುಗಡೆ ಮಾಡಿತ್ತು. ಫೋನ್ ನಲ್ಲಿ ಏಕ ಕಾಲದಲ್ಲಿ ವೈಫೈ, ಬ್ಲೂಟೂತ್, ಜಿಪಿಎಸ್ ಆನ್ ಮಾಡಿ ಬಳಸಿದ್ದರಿಂದ ಹೀಗಾಗಿರಬಹುದು ಎಂದು ಭಾವಿಸುತ್ತಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...