ಮರು ಬಿಡುಗಡೆಗೆ ಸಿದ್ಧವಾಗಿರುವ ಸ್ಯಾಮ್ಸಂಗ್ ನೋಟ್-7 – News Mirchi

ಮರು ಬಿಡುಗಡೆಗೆ ಸಿದ್ಧವಾಗಿರುವ ಸ್ಯಾಮ್ಸಂಗ್ ನೋಟ್-7

ಸ್ಯಾಮ್ಸಂಗ್ ತನ್ನ ಗ್ಯಾಲಾಕ್ಸಿ ನೋಟ್-7 ಸ್ಮಾರ್ಟ್ ಫೋನ್ ನ ನವೀಕೃತ ಆವೃತ್ತಿಯನ್ನು ಈ ವಾರದಲ್ಲಿ ಮಾರಾಟ ಶುರು ಮಾಡಲಿದೆ ಎಂದು ಹೇಳಿದೆ. ಈ ಹಿಂದೆ ಬ್ಯಾಟರಿ ಸ್ಪೋಟ ಪ್ರಕರಣಗಳು ಹೆಚ್ಚಾದ ನಂತರ ಮುಜುಗರಕ್ಕೀಡಾದ ಕಂಪನಿ, ನೋಟ್-7 ಸ್ಮಾರ್ಟ್ ಫೋನ್ ಗಳನ್ನು ಹಿಂತೆಗೆದುಕೊಂಡಿತ್ತು. ಲಕ್ಷಾಂತರ ಸ್ಮಾರ್ಟ್ ಫೋನ್ ಗಳ ಹಿಂತೆಗೆತದಿಂದ ನೂರಾರು ಕೋಟಿ ಡಾಲರ್ ಗಳಷ್ಟು ನಷ್ಟವನ್ನು ಅನುಭವಿಸಿತ್ತು.

ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಾಗಿದ್ದ ಗ್ಯಾಲಾಕ್ಸಿ ನೋಟ್-7 ಸ್ಮಾರ್ಟ್ ಫೋನ್ ಗಳನ್ನು ಹೊಸ ಬ್ಯಾಟರಿಗಳೊಂದಿಗೆ ನವೀಕರಿಸಿ ಮತ್ತೆ ಮಾರುಕಟ್ಟೆಗೆ ಬಿಡಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ. ಮೊದಲಿಗೆ ಜುಲೈ 7 ರಂದು ದಕ್ಷಿಣ ಕೊರಿಯಾ ದಲ್ಲಿ 4 ಲಕ್ಷ ಹ್ಯಾಂಡ್ ಸೆಟ್ ಗಳನ್ನು ಬಿಡುಗಡೆ ಮಾಡಲಿದೆ. ನಂತರ ಇತರೆ ದೇಶಗಳಲ್ಲಿ ಬಿಡುಗಡೆ ಮಾಡುವ ಬಗ್ಗೆ ಯೋಚಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.

ಗ್ಯಾಲಾಕ್ಸಿ ನೋಟ್7 ನಿಂದ ಮುಜುಗರಕ್ಕೀಡಾಗಿದ್ದ ಟೆಕ್ ದೈತ್ಯ ಸ್ಯಾಮ್ಸಂಗ್, ನಂತರ ಗ್ಯಾಲಾಕ್ಸಿ ಎಸ್8 ಬಿಡುಗಡೆ ಮಾಡಿ, ಉತ್ತಮ ಸ್ಪಂದನೆ ಪಡೆದು ಹೆಸರು ಉಳಿಸಿಕೊಂಡಿತ್ತು.

 

Loading...