Big Breaking News

ಸ್ಯಾಮ್ಸಂಗ್ ಕಂಪ್ಯೂಟರ್ ಉದ್ಯಮ ಲೆನೊವೋ ತೆಕ್ಕೆಗೆ?

ಪರ್ಸನಲ್ ಕಂಪ್ಯೂಟರ್ ಕ್ಷೇತ್ರದಲ್ಲಿ ಗ್ರಾಹಕರ ವಿಶ್ವಾಸ ಗಳಿಸಲು ವಿಫಲವಾಗಿರುವ ದಕ್ಷಿಣ ಕೊರಿಯಾದ ದೈತ್ಯ ಕಂಪನಿ ಸ್ಯಾಮ್‌ಸಂಗ್, ತನ್ನ ಪರ್ಸನಲ್ ಕಂಪ್ಯೂಟರ್ ವ್ಯಾಪಾರವನ್ನು ಚೀನಾದ ಕಂಪನಿ ಗೆ ಮಾರಲು ರಹಸ್ಯವಾಗಿ ಮಾತುಕತೆ ನಡೆಸುತ್ತಿದೆ ಎನ್ನಲಾಗುತ್ತಿದೆ. ವಿಶ್ವದಲ್ಲಿಯೇ ಪರ್ಸನಲ್ ಕಂಪ್ಯೂಟರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ.

Download Free

ಇದೇ ಕಾರಣಕ್ಕೆ ತನ್ನ ಪ್ರಿಂಟರ್ ವ್ಯಾಪಾರವನ್ನೂ ಈ ಹಿಂದೆ ಹೆಚ್.ಪಿ ಕಂಪನಿಗೆ 1.05 ಬಿಲಿಯನ್ ಡಾಲರ್ ಗಳಿಗೆ ಮಾರಿತ್ತು. ಸ್ಥಳೀಯ ಮಾಧ್ಯಮ ಬೆಲ್ ಹೇಳುವಂತೆ, ಸ್ಯಾಮ್‌ಸಂಗ್ ಪಿಸಿ ಉದ್ಯಮ ಸುಮಾರು 850 ಮಿಲಿಯನ್ ಡಾಲರ್ ಗೆ ಮಾರಾಟವಾಗುವ ನಿರೀಕ್ಷೆ ಇದೆ.

2014 ರಲ್ಲೇ ಯೂರೋಪಿಯನ್ ಮಾರುಕಟ್ಟೆಯಿಂದ ಕಾಲ್ತೆಗೆದಿದ್ದ ಸ್ಯಾಮ್‌ಸಂಗ್, ಈಗ ಯುಕೆ ಯಲ್ಲಿ ತನ್ನ ಕಂಪ್ಯೂಟರ್ ಮಾರಾಟವನ್ನು ನಿಲ್ಲಿಸಿದೆ. ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಎದುರಾಗಿರುವ ಪ್ರಬಲ ಸ್ಪರ್ಧೆಯೇ ಸ್ಯಾಮ‌್‌ಸಂಗ್ ಈ ನಿರ್ಧಾರಕ್ಕೆ ಬರಲು ಕಾರಣ ಎನ್ನಲಾಗುತ್ತಿದೆ.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache