ಗೌರಿ ಲಂಕೇಶ್ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದರು : ಚೇತನ್ ರಾಜನ್ ಆರೋಪ – News Mirchi

ಗೌರಿ ಲಂಕೇಶ್ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದರು : ಚೇತನ್ ರಾಜನ್ ಆರೋಪ

ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ವಿರುದ್ಧ ಸನಾತನ ಸಂಸ್ಥೆಯ ಅಧಿಕೃತ ವಕ್ತಾರ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಗೌರಿ ಲಂಕೇಶ್ ಅವರು ಬೆದರಿಕೆಗಳನ್ನು ಹಾಕುತ್ತಾ ಹಣ ಸುಲಿಗೆ ಮಾಡುತ್ತಿದ್ದರು ಎಂದು ಸನಾತನ ಸಂಸ್ಥೆಯ ಅಧಿಕೃತ ವಕ್ತಾರ ಚೇತನ್ ರಾಜನ್ ಆರೋಪಿಸಿದ್ದಾರೆ. ಆಕೆಗೆ ಮಾವೋವಾದಿಗಳ ಜೊತೆ ನೇರ ಸಂಬಂಧವಿದೆ ಎಂದು ಅವರು ಆರೋಪಿಸಿದ್ದಾರೆ.

ಕಮ್ಯೂನಿಷ್ಟ್ ಸಿದ್ಧಾಂತಗಳನ್ನು ಹೊಂದಿರುವ ವ್ಯಕ್ತಿಗಳು ಹತ್ಯೆಗೆ ಗುರಿಯಾದಾಗ ಸ್ಪಂದಿಸುವವರೆಲ್ಲರೂ ಹಿಂದುತ್ವ ಸಿದ್ಧಾಂತಗಳ ವಕ್ತಿಗಳ ಹತ್ಯೆಯಾದಾಗ ಮಾತ್ರ ಪ್ರತಿಕ್ರಿಯಿಸುತ್ತಿಲ್ಲ ಎಂದು ಚೇತನ್ ಹೇಳಿದ್ದಾರೆ

ಗೌರಿ ಲಂಕೇಶ್ ಅವರ ಹತ್ಯೆಗೂ ತಮಗೂ ಯಾವುದೇ ಸಂಬಂಧವಿಲ್ಲ, ಇತ್ತೀಚೆಗೆ ಹಿಂದೂ ಸಂಘಟನೆಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಆಕೆಯ ಹತ್ಯೆಯನ್ನು ನಾವು ಗಂಭೀರವಾಗಿ ಖಂಡಿಸುತ್ತೇವೆ ಎಂದು ಚೇತನ್ ರಾಜನ್ ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇಂತಹ ಕೃತ್ಯಗಳನ್ನು ಸಹಿಸಲೇಬಾರದು ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದರು.

ಪ್ರಹ್ಲಾದ್ ಜೋಷಿ ಅವರ ಮಾನನಷ್ಟ ಪ್ರಕರಣದಲ್ಲಿ ಗೌರಿ ತಪ್ಪಿತಸ್ಥರಾಗಿರುವುದನ್ನು ಯಾರೂ ಯಾಕೆ ಮಾತನಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು. ಕಳೆದ ವರ್ಷ ಮಾನನಷ್ಟ ಮೊಕದ್ದಮೆಯಲ್ಲಿ ನ್ಯಾಯಾಲಯವು ಗೌರಿ ಲಂಕೇಶ್ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಆಕೆ ನಡೆಸುತ್ತಿದ್ದ ವಾರಪತ್ರಿಕೆಯಲ್ಲಿ ಇಬ್ಬರು ಬಿಜೆಪಿ ಹಿರಿಯ ಮುಖಂಡರ ಬಗ್ಗೆ ಅವಹೇಳನಕಾರಿ ಲೇಖನ ಪ್ರಕಟಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಗೌರಿ ಲಂಕೇಶ್ ಅವರಿಗೆ 6 ತಿಂಗಳು ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು. ಆದರೆ ನಂತರ ಆಕೆಗೆ ಜಾಮೀನು ಲಭಿಸಿತ್ತು.

ಕಮ್ಯೂನಿಷ್ಟ್ ಸಿದ್ಧಾಂತದ ವ್ಯಕ್ತಿಗಳಾದ ದಾಬೋಲ್ಕರ್, ಕಲ್ಬುರ್ಗಿ ಮತ್ತು ಪನ್ಸಾರೆ ಹತ್ಯೆಗೀಡಾದಾಗ ತ್ರಿಪುರ ಮುಖ್ಯಮಂತ್ರಿ ಮತ್ತು ಸೀತಾರಾಮ್ ಯೆಚೂರಿ ಹೇಳಿಕೆಗಳನ್ನು ನೀಡುತ್ತಾರೆ. ಆದರೆ ಅದೇ ಹಿಂದುತ್ವದ ಪರ ಗುರಿತಿಸಿಕೊಂಡಿರುವ ವ್ಯಕ್ತಿಗಳ ಕೊಲೆಗಳಾದಾಗ ಯಾರೂ ಮಾತನಾಡುವುದಿಲ್ಲವೇಕೆ ಎಂದು ರಾಜನ್ ಪ್ರಶ್ನಿಸಿದ್ದಾರೆ.

Loading...