ಬೀದಿ ಗೂಂಡಾ ವಿವಾದ: ಅಂತಹ ಹೇಳಿಕೆ ತಪ್ಪು ಎಂದ ರಾಹುಲ್

View Later

ಬೆಂಗಳೂರು: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರನ್ನು ಬೀದಿ ಗೂಂಡಾ ಎಂದು ಕರೆದು ಕಾಂಗ್ರೆಸ್ ನ ಸಂದೀಪ್ ದೀಕ್ಷಿತ್ ಎಬ್ಬಿಸಿದ್ದ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ರಾಜಕಾರಣಿಗಳು ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಪಕ್ಷದ ಪತ್ರಿಕೆ “ನ್ಯಾಷನಲ್ ಹೆರಾಲ್ಡ್” ಅನ್ನು ಮರುಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್, ರಾಜಕಾರಣದಲ್ಲಿರುವವರು ಸೇನಾ ಮುಖ್ಯಸ್ಥರ ವಿರುದ್ಧ ಹೇಳಿಕೆ ನೀಡುವುದನ್ನು ಬಿಡಬೇಕು, ಇಂತಹ ಹೇಳಿಕೆ ನೀಡಿರುವುದು ಒಪ್ಪಿಕೊಳ್ಳಲಾಗದು ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿಯಯಲ್ಲಿ ನಿರೀಕ್ಷಿತ ಸಾಧನೆ ಮಾಡದ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನರೇಂದ್ರ ಮೋದಿಯವರು ಉದ್ಯೋಗ ಸೃಷ್ಟಿ ಮಾಡುವುದರಲ್ಲಿ ಶೇ. 100 ಕ್ಕೆ ಶೂನ್ಯ ಅಂಕ ಪಡೆದಿದ್ದಾರೆ ಎಂದು ಹೇಳಿದರು.