ಚಿತ್ರೀಕರಣ ವೇಳೆ ಸಂಜಯ್ ಲೀಲಾ ಬನ್ಸಾಲಿಗೆ ಕಪಾಳ ಮೋಕ್ಷ, ಹಲ್ಲೆ |News Mirchi

ಚಿತ್ರೀಕರಣ ವೇಳೆ ಸಂಜಯ್ ಲೀಲಾ ಬನ್ಸಾಲಿಗೆ ಕಪಾಳ ಮೋಕ್ಷ, ಹಲ್ಲೆ

ಜೈಪುರ:  ಬಾಲಿವುಡ್ ಚಿತ್ರ ನಿರ್ದೇಶಕ, ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ಚಿತ್ರೀಕರಣ ನಡೆಸುತ್ತಿದ್ದ ವೇಳೆ ಕೆಲವರು ಪ್ರತಿಭಟನೆ ನಡೆಸಿದ್ದು, ಅವರಿಗೆ ಕಪಾಳ ಮೋಕ್ಷ ಮಾಡಿ, ಕೂದಲು ಹಿಡಿದು ಎಳೆದಾಡಿ ಹಲ್ಲೆ ನಡೆಸಿದ ಘಟನೆ ಜೈಪುರದಲ್ಲಿ ನಡೆದಿದೆ. ಜೈಪುರ ರಾಣಿ ಕುರಿತ ಚಿತ್ರ “ಪದ್ಮಾವತಿ” ಚಿತ್ರೀಕರಣ ವೇಳೆ ಈ ಘಟನೆ ನಡೆದಿದೆ.

ರಜಪೂತ ಕರ್ಣಿ ಸೇನಾ ಸದಸ್ಯರು ಐತಿಹಾಸಿಕ ಜೈಘರ್ ಕೋಟೆಯ ಬಳಿ ನಡೆಯುತ್ತಿದ್ದ ಚಿತ್ರೀಕರಣ ಸ್ಥಳಕ್ಕೆ ಬಂದು ಸಂಜಯ್ ಲೀಲಾ ಬನ್ಸಾಲಿ ಮೇಲೆ ಹಲ್ಲೆ ನಡೆಸಿ ಚಿತ್ರೀಕರಣ ಉಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.

“ಪದ್ಮಾವತಿ’ ರಾಣಿ ಪದ್ಮಿನಿ ಕುರಿತಾದ ಐತಿಹಾಸಿಕ ಚಿತ್ರವಾಗಿದ್ದು, ಚಕ್ರವರ್ತಿ ಅಲ್ಲಾವುದ್ದೀನ್ ಖಿಲ್ಜಿ ಕೋಟೆಗೆ ತನ್ನ ಸೈನ್ಯದೊಂದಿಗೆ ನುಗ್ಗಿದಾಗ ಖಿಲ್ಜಿಗೆ ಕೋಟೆ ಒಪ್ಪಿಸಲು ನಿರಾಕರಿಸಿ, ಖಿಲ್ಜಿಯು ಕೋಟೆಯನ್ನು ವಶಪಡಿಸಿಕೊಳ್ಳುವ ಮುನ್ನ ಇತರೆ ಸ್ತ್ರೀಯರೊಂದಿಗೆ ಪ್ರಾಣ ತ್ಯಾಗ ಮಾಡಿದ್ದಳು.

ಚಿತ್ರದಲ್ಲಿ ರಾಣಿ ಪದ್ಮಿನಿ ಮತ್ತು ಅಲ್ಲಾವುದ್ದೀನ್ ಖಿಲ್ಜಿಯ ನಡುವೆ ಪ್ರೇಮ ದೃಶ್ಯಗಳಿರುವಂತೆ ತೋರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಟಿಸುತ್ತಿದ್ದಾರೆ. ಚಿತ್ರದಲ್ಲಿನ ಪದ್ಮಿನಿ ಮತ್ತು ಖಿಲ್ಜಿಯ ನಡುವಿನ ಪ್ರೇಮ ದೃಶ್ಯಗಳನ್ನು ಅಳಿಸುವಂತೆ ರಜಪೂತ ಕರ್ಣಿ ಸೇನಾ ಒತ್ತಾಯಿಸಿದೆ.

ಮೊದಲೇ ಚಿತ್ರದಲ್ಲಿನ ಸತ್ಯಕ್ಕೆ ದೂರವಾದ ವಿಷಯಗಳನ್ನು ತೋರಿಸುತ್ತಿದ್ದರ ಬಗ್ಗೆ ಚಿತ್ರತಯಾರಕರಿಗೆ ಎಚ್ಚರಿಸಿದ್ದೆವು. ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಮಾಹಿತಿ ಪಡೆದು ಇಲ್ಲಿ ಬಂದು ಸೇರಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ರಜಪೂತ ಸೇನಾದ ನಾಯಕ ನಾರಾಯಣ ಸಿಂಗ್ ಹೇಳಿದ್ದಾರೆ.

ಪೊಲೀಸರು ಹೇಳುವಂತೆ, ಈ ಘಟನೆಯ ನಂತರ ಈ ಸ್ಥಳದಲ್ಲಿ ಚಿತ್ರೀಕರಣ ನಡೆಸದಿರಲು ಬನ್ಸಾಲಿ ತೀರ್ಮಾನಿಸಿದ್ದಾರೆ.

English Summary: Filmmaker Sanjay Leela Bhansali was slapped and his hair was pulled on the sets of his film “Padmavati” in Jaipur by protesters who alleged that the film shows a much-celebrated Rajput queen in poor light.

Loading...
loading...
error: Content is protected !!