ಅಶ್ಲೀಲ ವೆಬ್ಸೈಟ್ ತೆರೆದರೆ ಭಕ್ತಿಗೀತೆ, ಮಕ್ಕಳನ್ನು ಗುರಿಯಾಗಿಸಿಕೊಂಡು ತಯಾರಾದ ಆಪ್ ಇದು… – News Mirchi

ಅಶ್ಲೀಲ ವೆಬ್ಸೈಟ್ ತೆರೆದರೆ ಭಕ್ತಿಗೀತೆ, ಮಕ್ಕಳನ್ನು ಗುರಿಯಾಗಿಸಿಕೊಂಡು ತಯಾರಾದ ಆಪ್ ಇದು…

ಬನಾರಸ್ ಯೂನಿವರ್ಸಿಟಿ ಪ್ರೊಫೆಸರ್ ಒಬ್ಬರು ಅಭಿವೃದ್ಧಿ ಪಡಿಸಿರುವ ಆಪ್ ಒಂದು ಅಶ್ಲೀಲ ವೆಬ್ಸೈಟ್ ಗಳಿಗೆ ಬ್ರೇಕ್ ಹಾಕುತ್ತಂತೆ. ಈ ಆಪ್ ಅಶ್ಲೀಲ ವೆಬ್ಸೈಟ್ ಗಳನ್ನು ತೆರೆದರೆ ಸಾಕು ಅವುಗಳನ್ನು ಬ್ಲಾಕ್ ಮಾಡುವುದಲ್ಲದೆ, ಇದರಲ್ಲಿ ಕೂಡಲೇ ಭಕ್ತಿ ಗೀತೆಗಳು ಬರುತ್ತವೆ. ಸಂಸ್ಕಾರಿ ಆಪ್ ಎಂದು ಇದು ಪ್ರಸಿದ್ಧವಾಗುತ್ತಿದೆ.

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ನ್ಯೂರಾಲಜಿ ಪ್ರೊಫೆಸರ್ ಡಾ. ವಿಜಯನಾಥ್ “ಹರ ಹರ ಮಹಾದೇವ” ಹೆಸರಿನಲ್ಲಿ ಇದನ್ನು ವಿನ್ಯಾಸಗೊಳಿಸಿದ್ದಾರೆ. ಅಶ್ಲೀಲ ವಿಷಯಗಳು ಅಥವಾ ಹಿಂಸೆಗೆ ಸಂಬಂಧಿಸಿದ ವೀಡೊಯೋ, ಫೋಟೋಗಳನ್ನು ತೆರೆದರು ಇದು ತನ್ನ ಕೆಲಸ ಮಾಡುತ್ತದೆ. ಪೋಷಕರಿಗೆ ತಿಳಿಯದಂತೆ ಅಶ್ಲೀಲ ಚಿತ್ರ, ವೀಡಿಯೋಗಳನ್ನು ನೋಡುವ ಮಕ್ಕಳನ್ನು ಗುರಿಯಾಗಿಸಿಕೊಂಡು ಈ ಮೊಬೈಲ್ ಆಪ್ ಅನ್ನು ಅಭಿವೃದ್ಧಿಗೊಳಿಸಲಾಗಿದೆ. ಈ ಆಪ್ ನ ಮತ್ತೊಂದು ವೈಶಿಷ್ಟ್ಯವೆಂದರೆ, ಇದು ಇನ್ಸ್ಟಾಲ್ ಮಾಡಿದ ನಂತರ ಹೈಡ್ ಆಗುತ್ತದೆ. ಅಂದರೆ ಇದನ್ನು ಇನ್ಸ್ಟಾಲ್ ಮಾಡಿದ್ದಾರೆ ಎಂಬುದೂ ಮಕ್ಕಳಿಗೆ ತಿಳಿಯುವುದಿಲ್ಲ.

ಈ ಆಪ್ ಅನ್ನು www.harharmahadev.co ವೆಬ್ಸೈಟ್ ನಿಂದ ಈ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ವಿಜಯನಾಥ್ ಹೇಳಿದ್ದಾರೆ. ಸದ್ಯ ಈ ಆಪ್ ಹಿಂದೂ ಭಕ್ತಿಗೀತೆಗಳನ್ನು ಮಾತ್ರ ಪ್ರಸಾರ ಮಾಡುತ್ತಿದ್ದು, ಶೀಘ್ರದಲ್ಲಿಯೇ ಇತರೆ ಧರ್ಮಗಳ ಭಕ್ತಿಗೀತೆಗಳನ್ನೂ ಸೇರಿಸಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಲ್ಯಾಪ್ ಟಾಪ್, ಡೆಸ್ಕ್ ಟಾಪ್ ವರ್ಷನ್ ಗಳಿಗೆ ಮಾತ್ರ ಲಭ್ಯವಿರುವ ಈ ಆಪ್, ಆಂಡ್ರಾಯ್ಡ್ ಫೋನ್ ಗಳಿಗೆ ಲಭ್ಯವಾಗಲು ಇನ್ನಷ್ಟು ಸಮಯ ಹಿಡಿಯುತ್ತದೆ ಎಂದು ವೆಬ್ ಡೆವಲಪರ್ ಅಂಕಿತ್ ಶ್ರೀವಾಸ್ತವ ಅವರು ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...