ಪಕ್ಷದ ಚುಕ್ಕಾಣಿ ಹಿಡಿಯಲು ಶಶಿಕಲಾ ಸಿದ್ಧ – News Mirchi

ಪಕ್ಷದ ಚುಕ್ಕಾಣಿ ಹಿಡಿಯಲು ಶಶಿಕಲಾ ಸಿದ್ಧ

ಒಂದು ಕಾಲದ ವೀಡಿಯೊ ಬಾಡಿಗೆ ಅಂಗಡಿಯ ಮಾಲೀಕಳಾದ , ಜಯಾ ನಿಧನದ ನಂತರ ಪ್ರಬಲ ರಾಜಕೀಯ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೇರಲು ಸಿದ್ದರಾಗಿದ್ದಾರೆ. ಪಕ್ಷದ ಜನರಲ್ ಕೌನ್ಸಿಲ್ ಮತ್ತು ಕಾರ್ಯಕಾರಿ ಸಮಿತಿ ಡಿಸೆಂಬರ್ 29 ರಂದು ಸಭೆ ಸೇರಲಿದ್ದು, ಅಲ್ಲಿ ಶಶಿಕಲಾರನ್ನು ಪ್ರದಾನ ಕಾರ್ಯದರ್ಶಿಯಾಗಿ ಅಯ್ಕೆ ಮಾಡಲಿವೆ.

ಆತುರದಲ್ಲಿ ಪಕ್ಷದ ಪ್ರದಾನ ಕಾರ್ಯದರ್ಶಿ ಹುದ್ದೆಯನ್ನು ಪಡೆಯುವ ಬದಲು, ಎಲ್ಲಾ ಜಿಲ್ಲಾ ಘಟಕಗಳು ತಮ್ಮನ್ನು ಬೆಂಬಲಿಸಿ ನಿರ್ಣಯ ಅಂಗೀಕರಿಸುವುದಕ್ಕಾಗಿ ಕಾದಿದ್ದರು. ಬಹುತೇಕ ಎಲ್ಲಾ ಮಂತ್ರಿಗಳು ಪಕ್ಷದ ಜಿಲ್ಲಾ ಘಟಕಗಳು ಉಸ್ತುವಾರಿಯನ್ನು ಹೊತ್ತಿದ್ದು, ತಮ್ಮ ತಮ್ಮ ಜಿಲ್ಲೆಗಳಲ್ಲಿ ಪಕ್ಷದ ಘಟಕಗಳ ಸಭೆ ನಡೆಸಿ ಶಶಿಕಲಾರಿಗೆ ಬೆಂಬಲಿಸಲು ತೀರ್ಮಾನಿಸಲು ಸುಲಭವಾಯಿತು.

ಇದೇ ವೇಳೆ, ಮತ್ತೊಂದು ಕಡೆ ರಾಜ್ಯದಲ್ಲಿ ನೆಲೆಯಿಲ್ಲದ ಬಿಜೆಪಿ, 2019 ರ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ತಮಿಳುನಾಡಿನಲ್ಲಿ 39 ಲೋಕಸಭೆ ಸ್ಥಾನಗಳ ಪೈಕಿ 37 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಗೆ ಉತ್ತಮ ಮೈತ್ರಿ ಪಕ್ಷವಾಗಿ ಕಂಡಿದೆ.

Comments (wait until it loads)
Loading...
class="clear">
error: Content is protected !!

News Mirchi is Stephen Fry proof thanks to caching by WP Super Cache