ಶಶಿಕಲಾಗೆ ಷರತ್ತುಬದ್ಧ ಪೆರೋಲ್ – News Mirchi

ಶಶಿಕಲಾಗೆ ಷರತ್ತುಬದ್ಧ ಪೆರೋಲ್

ಚೆನ್ನೈನ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ತನ್ನ ಪತಿ ನಟರಾಜನ್ ಅವರನ್ನು ಭೇಟಿಯಾಗಲು ಶಶಿಕಲಾ ನಟರಾಜನ್ ಅವರಿಗೆ ಷರತ್ತುಬದ್ದ ಪೆರೋಲ್ ಮಂಜೂರಾಗಿದೆ. ಆದಾಯಕ್ಕಿಂದ ಹೆಚ್ಚು ಆಸ್ತಿ ಹೊಂದಿರುವ ಪ್ರಕರಣದಲ್ಲಿ ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಹೃದಯ, ಮೂತ್ರಪಿಂಡ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾದ ನಟರಾಜನ್ ಅವರನ್ನು ಕಾಣಲು ಎರಡು ವಾರಗಳಿಗಾಗಿ ಶಶಿಕಲಾ ಪೆರೋಲ್ ಗೆ ಮನವಿ ಮಾಡಿದ್ದರು. ಆದರೆ ಕೇವಲ ಐದು ದಿನಗಳ ಪೆರೋಲ್ ಅಷ್ಟೇ ಮಂಜೂರಾಗಿದೆ ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಆಕೆ ಸಲ್ಲಿಸಿದ್ದ ಪೆರೋಲ್ ಅರ್ಜಿಯಲ್ಲಿ ಕೆಲ ಲೋಪಗಳಿದ್ದ ಕಾರಣ ಅದು ತಿರಸ್ಕೃತಗೊಂಡಿತ್ತು. ಎರಡನೇ ಬಾರಿ ಸಲ್ಲಿಸಿದ ಅರ್ಜಿಗೆ ಕಾರಾಗೃಹ ಅಧಿಕಾರಿಗಳು ಸ್ಪಂದಿಸಿದ್ದಾರೆ.

ಪೆರೋಲ್ ಅವಧಿಯಲ್ಲಿ ರಾಜಕೀಯ ಸಭೆಗಳನ್ನು ನಡೆಸಬಾರದು, ತಮಿಳುನಾಡು ಹೊರತು ಪಡಿಸಿ ಇತರೆ ರಾಜ್ಯ, ನಗರಗಳಿಗೆ ಹೋಗಬಾರದು, ಸಂಬಂಧಿಕರ ಮನೆಯಲ್ಲಿಯೇ ವಾಸ್ತವ್ಯ ಹೂಡಿ, ನಟರಾಜನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಮಾತ್ರ ತೆರಳಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

Get Latest updates on WhatsApp. Send ‘Add Me’ to 8550851559

Contact for any Electrical Works across Bengaluru

Loading...
error: Content is protected !!