ಸೈನೈಡ್ ಮಲ್ಲಿಕಾ ಪಕ್ಕದ ಕೊಠಡಿಯಲ್ಲೇ ಶಶಿಕಲಾ! – News Mirchi

ಸೈನೈಡ್ ಮಲ್ಲಿಕಾ ಪಕ್ಕದ ಕೊಠಡಿಯಲ್ಲೇ ಶಶಿಕಲಾ!

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಣ್ಣಾಡಿಎಂಕೆ ನಾಯಕಿ ಶಶಿಕಲಾ ಇರುವ ಕೊಠಡಿಯಲ್ಲೇ ಆರು ಕೊಲೆ ಮಾಡಿದ್ದ ಸೈನೈಡ್ ಮಲ್ಲಿಕಾ ಇರುವುದಾಗಿ ಜೈಲು ಅಧಿಕಾರಿಗಳು ಹೇಳಿದ್ದಾರೆ. ದೇವಸ್ಥಾನಗಳಲ್ಲಿ ಪರಿಚಯವಾದ ಆರು ಜನ ಮಹಿಳೆಯರನ್ನು ಚಿನ್ನಕ್ಕಾಗಿ ವಿಷವಿಟ್ಟು ಕೊಂದ ಆರೋಪಗಳು ಸೈನೈಡ್ ಮಲ್ಲಿಕಾ ಮೇಲಿವೆ.

ಅಂತಹ ಮಲ್ಲಿಕಾ ಈಗ, ಇರುವ ಪಕ್ಕದ ಕೊಠಡಿಯಲ್ಲೇ ಇರುವ ಶಶಿಕಲಾಳನ್ನು ಮಾತನಾಡಿಸಲು ಪ್ರಯತ್ನಿಸುತ್ತಿದ್ದಾಳೆ ಎಂದು ಬೆಂಗಳೂರು ಮಿರ್ರರ್ ಪತ್ರಿಕೆ ವರದಿ ಮಾಡಿದೆ. ಆದರೆ ಮೊದಲ ದಿನ ಮಲ್ಲಿಕಾಳೊಂದಿಗೆ ಮಾತನಾಡದ ಶಶಿಕಲಾ, ಗುರುವಾರ ಮಲ್ಲಿಕಾಳನ್ನು ನೋಡಿ ಮುಗುಳ್ನಕ್ಕರು ಎಂದು ವರದಿಯಲ್ಲಿದೆ. ತನಗೆ ವಿಶೇಷ ಕೊಠಡಿ, ಸೌಲಭ್ಯ ಕಲ್ಪಿಸಬೇಕೆಂದು ಮಾಡಿದ್ದ ಮನವಿಯನ್ನು ಕೋರ್ಟ್ ನಿರಾಕರಿಸಿದ್ದರಿಂದಾಗಿ ಶಶಿಕಲಾ ಎಲ್ಲಾ ಖೈದಿಗಳಂತೆ ಇರಬೇಕಾಗಿದೆ.

Loading...

Leave a Reply

Your email address will not be published.