ಜಯಲಲಿತಾ ಮೇಲೆ ವಿಷಪ್ರಯೋಗ! |News Mirchi

ಜಯಲಲಿತಾ ಮೇಲೆ ವಿಷಪ್ರಯೋಗ!

ಎಐಎಡಿಎಂಕೆ ನಾಯಕಿ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ರವರಿಗೆ ಶಶಿಕಲಾ ಮತ್ತಾಕೆಯ ತಂಡ ಸೇರಿ ವಿಷಪ್ರಯೋಗ ನಡೆಸಿದ್ದಾರೆ ಎಂದು ಎಐಎಡಿಎಂಕೆ ಪಕ್ಷದ ಪರ ಸುಪ್ರೀಂ ಕೋರ್ಟ್ ವಕೀಲ ಆರ್.ಕೃಷ್ಣಮೂರ್ತಿ ಆರೋಪಿಸಿದ್ದಾರೆ.

ಈ ಆರೋಪಗಳಿರುವ ಆಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ವಿಷ ಪ್ರಯೋಗದಿಂದಲೇ ಜಯಲಲಿತಾ ಮೃತಪಟ್ಟಿದ್ದಾರೆ, ಜಯಲಲಿತಾ ಆಸ್ತಿಯನ್ನು ಕಬಳಿಸಲೂ ಶಶಿಕಲಾ ಪ್ರಯತ್ನಿಸುತ್ತಿದ್ದಾರೆ, ಜಯಾ ಆಸ್ತಿ ಇತರರ ಪಾಲಾಗದಂತೆ ಸುಪ್ರೀಂ ಕೋರ್ಟಿನಲ್ಲಿ ದೂರು ದಾಖಲಿಸುವುದಾಗಿ ಅವರು ಹೇಳಿದ್ದಾರೆ.

  • No items.

ಶಶಿಕಲಾ ಪೊಯೆಸ್ ಗಾರ್ಡನ್ ಮನೆಯನ್ನು ಬಿಟ್ಟು ಹೋಗಬೇಕು ಎಂದು ಕೃಷ್ಣಮೂರ್ತಿ ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ಪ್ರಕರಣ ಸಂಬಂಧ ಶುಕ್ರವಾರ ಕೊಯಂಬತ್ತೂರಿಗೆ ಬಂದಿದ್ದ ಕೃಷ್ಣಮೂರ್ತಿಯನ್ನು ಎಐಡಿಎಂಕೆ ವಕೀಲರು ಸುತ್ತುವರೆದು, ಅವರ ಹೇಳಿಕೆಗಳನ್ನು ಹಿಂತೆಗೆದುಕೊಳ್ಳುವಂತೆ ಬೆದರಿಸಿದ್ದಾರೆ.

Loading...
loading...
error: Content is protected !!