ಶಶಿಕಲಾ ವಿರುದ್ಧ ತಿರುಗಿ ಬಿದ್ದ 20 ಶಾಸಕರು? ಆಕೆಯ ಹಿಡಿತದಿಂದ ತಪ್ಪಿಸಿಕೊಂಡರೆ ಸಾಕು ಶಿವನೇ… – News Mirchi

ಶಶಿಕಲಾ ವಿರುದ್ಧ ತಿರುಗಿ ಬಿದ್ದ 20 ಶಾಸಕರು? ಆಕೆಯ ಹಿಡಿತದಿಂದ ತಪ್ಪಿಸಿಕೊಂಡರೆ ಸಾಕು ಶಿವನೇ…

ತನ್ನ ಗುಂಪಿನ ಶಾಸಕರು ಜಾರಿಹೋಗದಂತೆ ಅಣ್ಣಾಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಕ್ಯಾಂಪ್ ರಾಜಕೀಯ ನಡೆಸುತ್ತಿದ್ದಾರೆ. ಆದರೆ, ಶಶಿಕಲಾ ಶಿಬಿರದಲ್ಲಿರುವ 20 ಕ್ಕೂ ಹೆಚ್ಚು ಶಾಸಕರು ತಿರುಗಿಬಿದ್ದಿರುವುದಾಗಿ ತಿಳಿದುಬಂದಿದೆ. ತಾವು ಪ್ನನೀರ್ ಸೆಲ್ವಂ ಗೆ ಬೆಂಬಲ ನೀಡುತ್ತೇವೆ, ತಮ್ಮನ್ನು ಬಿಟ್ಟುಬಿಡಿ ಎಂದು ಆ ಶಾಸಕರು ಹೇಳುತ್ತಿರುವುದಾಗಿ ವರದಿಯಾಗಿದೆ. ಆದರೆ, ಇದಕ್ಕೆ ಅನುಮತಿ ನೀಡದ ಶಶಿಕಲಾ ವರ್ಗ ಮಾತ್ರ ಒತ್ತಾಯಪೂರ್ವಕವಾಗಿ ಅವರನ್ನು ಬಂಧಿಸಿ ರಿಸಾರ್ಟ್ ನಲ್ಲಿ ಇಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ. ನೂರಾರು ಜನ ಶಶಿಕಲಾ ಬೆಂಬಲಿಗರು ಶಾಸಕರು ಕೈಜಾರದಂತೆ, ತಪ್ಪಿಸಿಕೊಂಡು ಹೋಗದಂತೆ ಕಾವಲು ಕಾಯುತ್ತಿದ್ದಾರೆನ್ನಲಾಗಿದೆ. ಆ 20 ಜನ ಶಾಸಕರನ್ನು ಶಶಿಕಲಾ ಬಿಟ್ಟುಬಿಡುತ್ತಾರಾ, ಆ ಶಾಸಕರು ಶಶಿಕಲಾರಿಗೆ ಬೆಂಬಲ ನೀಡುತ್ತಾರಾ ಎಂಬುದು ಪ್ರಶ್ನೆಯಾಗಿ ಉಳಿದಿದೆ.

ಆಡಳಿತ ಪಕ್ಷ ಅಣ್ಣಾಡಿಎಂಕೆ ಶಾಸಕರನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಯಾರಿಗೂ ತಿಳಿಯದಂತೆ ವಿವಿಧ ರೆಸಾರ್ಟ್ ಗಳಿಗೆ, ಬೀಚ್ ಗಳಿಗೆ ಕಳುಹಿಸಿದ್ದು ನಮಗೆ ತಿಳಿದದ್ದೇ. ವಿರೋಧಿಗಳ ಆಮಿಷಗಳಿಗೆ ಒಳಗಾಗದಂತೆ ಅವರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಶಶಿಕಲಾ ಭಾರೀ ಪ್ಲಾನ್ ಮಾಡಿದ್ದಾಳೆ. ಚೆನ್ನೈಗೆ 80 ಕಿ.ಮೀ ದೂರದ ಮಹಾಬಲಿಪುರಂ ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ಅಣ್ಣಾಡಿಎಂಕೆ ಪಕ್ಷದ ಒಂದು ಗುಂಪು ಉಳಿದುಕೊಂಡಿದೆ. ಈ ರಿಸಾರ್ಟ್ ಗೆ ಮಾಧ್ಯಮಗಳನ್ನು ಕೂಡಾ ಬಿಟ್ಟುಕೊಳ್ಳುತ್ತಿಲ್ಲ. ಹೀಗಾಗಿ ಶಾಸಕರಿಗೆ ಸರಿಯಾಗಿ ಬಟ್ಟೆ ಬರೆ ಸಹಾ ಇಲ್ಲವಾಗಿದೆ, ಜೈಲಿನಲ್ಲಿ ಇರುವಂತೆ ಅವರಿಗೆ ಭಾಸವಾಗುತ್ತಿದೆ ಎನ್ನಲಾಗಿದೆ. ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿಯಿಂದ ಕೆಲ ಶಾಸಕರು ಆತಂಕಗೊಂಡಿದ್ದು, ಶಶಿಕಲಾ ಹಿಡಿತದಿಂತ ಯಾವಾಗ ತಪ್ಪಿಸಿಕೊಳ್ಳುವುದು ಶಿವನೇ ಎಂದು ಒಲ್ಲದ ಮನಸ್ಸಿನಿಂದ ಕಾಲ ಕಳೆಯುತ್ತಿದ್ದಾರೆ.

Loading...

Leave a Reply

Your email address will not be published.