ಯೋಗಾಕ್ಕೆ ಜೈ ಎಂದ ಮತ್ತೊಂದು ಮುಸ್ಲಿಂ ರಾಷ್ಟ್ರ

ನವದೆಹಲಿ: ಭಾರತೀಯ ಯೋಗಾಗೆ ವಿಶ್ವಮನ್ನಣೆ ಹೆಚ್ಚಾಗುತ್ತಿದೆ. ಪ್ರಪಂಚ ಯೋಗಾ ಮಹತ್ವವನ್ನು ಅರ್ಥ ಮಾಡಿಕೊಳ್ಳುತ್ತಿದೆ. ಇದೀಗ ಸೌದಿ ಅರೇಬಿಯಾ ಕೂಡಾ ಯೋಗಾ ಗೆ ಜೈ ಎಂದಿದೆ. ನೌಫ್ ಮಾರ್ವಾಯ್ ಎಂಬ ಮಹಿಳೆ ಸೌದಿ ಅರೋಬಿಯಾದಲ್ಲಿ ಯೋಗಾ ಕುರಿತು ಸಾಕಷ್ಟು ಪ್ರಚಾರ ನಡೆಸಿದ್ದರು. ಆಕೆಯ ಶ್ರಮಕ್ಕೆ ಉತ್ತಮ ಫಲಿತಾಂಶ ದೊರೆತಿದೆ. ಯೋಗಾಗೆ ಕ್ರೀಡೆಯ ಸ್ಥಾನಮಾನವನ್ನು ನೀಡುತ್ತಿರುವುದಾಗಿ ಹೇಳಿರುವ ಸೌದಿ ಅರೇಬಿಯಾ ಸರ್ಕಾರ ಯೋಗಾಗೆ ಬೆಂಬಲ ವ್ಯಕ್ತಪಡಿಸಿದೆ.

ಇನ್ನು ಮುಂದೆ ಆ ದೇಶದಲ್ಲಿ ಅನುಮತಿ ಪಡೆದು ಯೋಗಾ ಶಿಕ್ಷಣವನ್ನು ಪ್ರಚಾರ ಮಾಡಬಹುದು, ಅಭ್ಯಾಸವೂ ಮಾಡಬಹುದು. ಯೋಗಾಗೆ ಅತ್ಯಂತ ಹೆಚ್ಚಿನ ಪ್ರಚಾರ ನೀಡುತ್ತಿರುವವರಲ್ಲಿ ಬಾಬಾ ರಾಮದೇವ್ ಅವರೂ ಒಬ್ಬರು. ಅವರು ಇತ್ತೀಚೆಗೆ ಯೋಗಾ ಮಹತ್ವದ ಕುರಿತು ಮಾತನಾಡಿ, ಯೋಗಾ ಮತ್ತು ಧರ್ಮಕ್ಕೆ ಸಂಬಂಧವಿಲ್ಲ, ಅದನ್ನು ಯಾರು ಬೇಕಾದರೂ ಅಭ್ಯಾಸ ಮಾಡಬಹುದು ಎಂದು ಹೇಳಿದ್ದರು.

Get Latest updates on WhatsApp. Send ‘Add Me’ to 8550851559