ತನಗಿಂತ ಮುಂದೆ ನಡೆಯುತ್ತಾಳೆಂದು ಡೈವೋರ್ಸ್! – News Mirchi

ತನಗಿಂತ ಮುಂದೆ ನಡೆಯುತ್ತಾಳೆಂದು ಡೈವೋರ್ಸ್!

ದುಬೈ: ವರದಕ್ಷಿಣೆ, ಕಿರುಕುಳ ಕಾಯ್ದೆಯಡಿ ಡೈವೋರ್ಸ್ ನೀಡುವುದು ಕೇಳಿದ್ದೇವೆ. ಆದರೆ ತನ್ನ ಹೆಂಡತಿ ತನಗಿಂತ ಮುಂದೆ ನಡೆದಳು ಎಂಬ ಕಾರಣಕ್ಕೇ ವಿಚ್ಛೇದನ ನೀಡಿರುವ ಘಟನೆ ದುಬೈನಲ್ಲಿ ವರದಿಯಾಗಿದೆ. ವಿಚಿತ್ರ ಕಾರಣಗಳಿಗೆ ವಿಚ್ಛೇದನ ನೀಡುವಲ್ಲಿ ಸೌದಿ ಜನರು ಮುಂದಿದ್ದಾರೆ. ಅದೂ ಮದುವೆಯಾದ ಸ್ವಲ್ಪ ದಿನಗಳಲ್ಲಿಯೇ ಇಂತಹ ವಿಚ್ಛೇದನಗಳು ಹೆಚ್ಚಾಗುತ್ತಿರುವುದು ಗಮನಾರ್ಹ.

ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಹಲವು ಬಾರಿ ತನ್ನ ಹಿಂದೆ ನಡೆಯುವಂತೆ ಹೇಳಿದ್ದ. ಆಕೆ ಮಾತ್ರ ಆತನಿಗಿಂದ ಸ್ವಲ್ಪ ಮುಂದೆ ನಡೆದು ಹೋಗುತ್ತಿದ್ದಳಂತೆ. ಇಷ್ಟಕ್ಕೇ ಆತ ಆಕೆಗೆ ಡೈವೋರ್ಸ್ ನೀಡಿದ್ದಾನೆ ಎಂದು ಸೌದಿ ದಿನಪತ್ರಿಕೆಯೊಂದು ವರದಿ ಮಾಡಿದೆ. ಮತ್ತೊಂದು ಘಟನೆಯಲ್ಲಿ ಅತಿಥಿಗಳಿಗೆ ತನ್ನ ಪತ್ನಿಯು ತಲೆ ಮಾಂಸ ಬಡಿಸಲು ಮರೆತಳೆಂಬ ಕಾರಣಕ್ಕೇ ವ್ಯಕ್ತಿಯೊಬ್ಬರು ವಿಚ್ಛೇದನ ನೀಡಿದ್ದಾರೆ.

ಕಳೆದೆರಡು ವರ್ಷಗಳಲ್ಲಿ ಸಂಪ್ರದಾಯಗಳು, ಆಧುನಿಕ ತಂತ್ರಜ್ಞಾನಗಳ ಕಾರಣದಿಂದ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚಾಗಿವೆ ಎಂದು ವಿವಾಹಗಳನ್ನು ನಿರ್ವಹಿಸುವ ಅಧಿಕಾರಿ ಹುಮೂದ್ ಅಲ್ ಶಿಮ್ಮಾರಿ ಹೇಳಿದ್ದಾರೆ.

Click for More Interesting News

Loading...
error: Content is protected !!