ಟ್ರಿಪಲ್ ತಲಾಖ್ ಕುರಿತು ಉಪರಾಷ್ಟ್ರಪತಿ ಪತ್ನಿ ಮಹತ್ವದ ಹೇಳಿಕೆ… – News Mirchi
We are updating the website...

ಟ್ರಿಪಲ್ ತಲಾಖ್ ಕುರಿತು ಉಪರಾಷ್ಟ್ರಪತಿ ಪತ್ನಿ ಮಹತ್ವದ ಹೇಳಿಕೆ…

ಅಲೀಘಡ: ದೇಶಾದ್ಯಂತ ತ್ರಿವಳಿ ತಲಾಖ್ ಕುರಿತ ಗಂಭೀರ ಚರ್ಚೆ ನಡೆಯುತ್ತಿರುವ ವೇಳೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಪತ್ನಿ ಸಲ್ಮಾ ಅನ್ಸಾರಿ ಮಹತ್ವದ ಹೇಳಿಕೆ ನೀಡಿದ್ದಾರೆ. ಮೂರು ಬಾರಿ ತಲಾಖ್ ಹೇಳಿದ ಮಾತ್ರಕ್ಕೆ ಅದು ವಿಚ್ಛೇಧನ ಎಂದು ಭಾವಿಸಬಾರದು ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿ ತಲಾಖ್ ತಲಾಖ್ ತಲಾಖ್ ಎಂದರೆ ಅದು ವಿಚ್ಛೇಧನವಾಗುವುದಿಲ್ಲ. ಮುಸ್ಲಿಂ ಮಹಿಳೆಯರಿಗೆ ಈ ಸಂದರ್ಭದಲ್ಲಿ ಒಂದು ಮಾತು ಹೇಳುತ್ತೇನೆ. ಕುರಾನ್ ಓದಿ, ಮುಸ್ಲಿಂ ಧಾರ್ಮಿಕ ಮುಖಂಡರ ಹೇಳುವ ಮಾತುಗಳನ್ನೇ ಪಾಲಿಸುವುದರೊಂದಿಗೆ ಕುರಾನ್ ಓದಿದರೆ ಅದರಲ್ಲಿ ಸತ್ಯ ಏನಿದೆ ಎಂಬುದು ಅರ್ಥವಾಗುತ್ತದೆ. ಹಲವು ಮುಸ್ಲಿಂ ಧಾರ್ಮಿಕ ಗುರುಗಳು ಕೇವಲ ಅವರ ಭಾವನೆಗಳನ್ನೇ ಹೇಳುತ್ತಿರುತ್ತಾರೆ ಎಂದು ಸಲ್ಮಾ ಹೇಳಿದ್ದಾರೆ.

ಮೌಲಾನಾಗಳು ಏನೇ ಹೇಳಿದರೂ, ಅದು ಸತ್ಯ ಎಂದು ನೀವು ನಂಬುತ್ತೀರಿ. ಅರಬೇಕ್ ನಲ್ಲಿರುವ ಕುರಾನ್ ನನ್ನು ಓದಿ, ಅನುವಾದಗಳನ್ನಲ್ಲ. ಆಗಲೇ ಷರಿಯತ್ ಏನು ಹೇಳುತ್ತದೆಯೋ ಎಂದು ನಮಗೆ ತಿಳಿಯುತ್ತದೆ. ಯಾರೋ ಹೇಳಿದ್ದನ್ನು ಕುರುಡಾಗಿ ಪಾಲಿಸಬಾರದು ಎಂದು ಆಕೆ ಹೇಳಿದ್ದಾರೆ. ಅಲೀಘಡದ ಅಲ್ ನೂರ್ ಚಾರಿಟಬಲ್ ಸೊಸೈಟಿ ಚಾಚಾ ನೆಹರೂ ಮದರಸಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

Contact for any Electrical Works across Bengaluru

Loading...
error: Content is protected !!