ಮಿನಿಮಮ್ ಬ್ಯಾಲೆನ್ಸ್ ಇಲ್ಲದ ಅಕೌಂಟ್ಗಳಿಂದ SBI ವಸೂಲಿ ಮಾಡಿದ ದಂಡ 235 ಕೋಟಿ!

 

ಇಂಧೋರ್: ಮಿನಿಮಮ್ ಬ್ಯಾಲೆನ್ಸ್ ನಿಯಮಗಳನ್ನು ಪಾಲಿಸದವರ ಗ್ರಾಹಕರ ಖಾತೆಗಳಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರೀ ಮೊತ್ತದ ಹಣವನ್ನು ದಂಡದ ರೂಪದಲ್ಲಿ ವಸೂಲಿ ಮಾಡಿದೆ. ಮಾಸಿಕ ಕನಿಷ್ಠ ಬ್ಯಾಲೆನ್ಸ್ ಉಳಿಸದವರೆಲ್ಲರ ಖಾತೆಗಳಿಂದ ದಂಡದ ರೂಪದಲ್ಲಿ ವಸೂಲಿ ಮಾಡಿದ ಮೊತ್ತವೆಷ್ಟು ಗೊತ್ತೇ. ಬರೋಬ್ಬರಿ ರೂ.235.06 ಕೋಟಿ.

ಹೌದು.. 388.74 ಲಕ್ಷ ಮಿನಿಮಮ್ ಬ್ಯಾಲೆನ್ಸ್ ನಿಯಮಗಳನ್ನು ಪಾಲಿಸಿದ ಅಕೌಂಟ್ ಗಳಿದ್ದು, ಅಷ್ಟು ಅಕೌಂಟ್ ಗಳಿಂದ 235.06 ಕೋಟಿಯಷ್ಟು ವಸೂಲಿ ಮಾಡಿದೆ. ಈ ವಿಷಯವನ್ನು ನೀಮುಚ್ ನ ಆರ್.ಟಿ.ಐ ಕಾರ್ಯಕರ್ತ ಚಂದ್ರಶೇಖರ್ ಗೌಡ್ ದಾಖಲಿಸಿದ ಅರ್ಜಿಗೆ ಉತ್ತರವಾಗಿ ಎಸ್.ಬಿ.ಐ ಉತ್ತರ ನೀಡಿದೆ.

ಸೈನಿಕರಿಗೆ ಎಸಿ ಜಾಕೆಟ್ಗಳನ್ನು ಒದಗಿಸಲು ಕೇಂದ್ರದ ಚಿಂತನೆ

ಜೂನ್ 30ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ಕನಿಷ್ಟ ಮೊತ್ತ ಉಳಿಸದ 388.74 ಲಕ್ಷ ಖಾತೆಗಳಿಂದ ರೂ.235.06 ಕೋಟಿ ವಸೂಲಿ ಮಾಡಿದ್ದೇವೆ ಎಂದು ಬ್ಯಾಂಕ್ ಹೇಳಿದೆ. ಮುಂಬೈ ನ ಬ್ಯಾಂಕ್ ಆಪರೇಷನ್ಸ್ ಡಿಪಾರ್ಟ್ಪೆಂಟ್ ಡಿಜಿಎಂ ಈ ಮಾಹಿತಿಯನ್ನು ನೀಡಿದ್ದಾರೆ ಎಂದು ಆರ್.ಟಿ.ಐ ಕಾರ್ಯಕರ್ತ ಚಂದ್ರಶೇಖರ್ ಗೌಡ್ ಹೇಳಿದ್ದಾರೆ. ಆದರೆ ಯಾವ ವರ್ಗದ ಖಾತೆಗಳಿಂದ ಈ ದಂಡಗಳನ್ನು ವಸೂಲಿ ಮಾಡಾಗಿದೆ ಎಂಬ ವಿಷಯವನ್ನು ಎಸ್.ಬಿ.ಐ ಬಹಿರಂಗಪಡಿಸಿಲ್ಲವೆಂದು ಅವರು ಹೇಳಿದ್ದಾರೆ.

ದೇಶದಲ್ಲಿ ಅತ್ಯಂತ ಅಸಂತೃಪ್ತ ವ್ಯಕ್ತಿ ನಾನೇ, ಮೋದಿ ನಿರಾಸೆಗೊಳಿಸಿದ್ದಾರೆ: ಜೇಠ್ಮಲಾನಿ