ಠೇವಣಿಗಳ ಮೇಲಿನ ಬಡ್ಡಿ ದರ ಕಡಿತಗೊಳಿಸಿದ ಎಸ್‌ಬಿಐ

ದೊಡ್ಡ ನೊಟು ರದ್ದು ಪ್ರಭಾವ ಬಡ್ಡಿ ದರಗಳ ಮೇಲೆ ಉಂಟಾಗಿದೆ. ಕೆಲವು ಬ್ಯಾಂಕುಗಳು ಠೇವಣಿಗಳ‌ ಮೇಲಿನ ಬಡ್ಡಿ ದರ ಕಡಿತಗೊಳಿಸಿದರೆ, ಇನ್ನೂ ಕೆಲವು ಬ್ಯಾಂಕುಗಳು ಸಾಲಗಳ ಮೇಲಿನ ಬಡ್ಡಿ ದರಗಳಲ್ಲಿ ಕಡಿತಗೊಳಿಸಿವೆ. ಹಳೆಯ ನೋಟುಗಳು ಬದಲಾಯಿಸುವ ಸಲುವಾಗಿ ಬ್ಯಾಂಕುಗಳಿಗೆ ಹಣದ ಹೊಳೆ ಹರಿದು ಬರುತ್ತಿದೆ. ಸಾಮಾನ್ಯ ದಿನಗಳಿಗಿಂತ ಈಗ ಬ್ಯಾಂಕ್ ಗಳಲ್ಲಿ ರೂ. 2 ಲಕ್ಷ ಕೋಟಿ ರೂಪಾಯಿಯಷ್ಟು ಹೆಚ್ಚವರಿ ಹಣ ಬಂದು ಸೇರಿದೆ. ಈ ಹಣದಿಂದ ಬ್ಯಾಂಕುಗಳಿಗೆ ಶೇ. 5.75 ರಷ್ಟು ಬಡ್ಡಿ ಮಾತ್ರ ಸಿಗುತ್ತದೆ. ಹೀಗಾಗಿ ನಷ್ಟಕ್ಕೊಳಗಾಗದಂತೆ ಇರಲು ಬಡ್ಡಿ ದರಗಳನ್ನು ಕಡಿತಗೊಳಿಸಲೇ ಬೇಕಾದ ಪರಿಸ್ಥಿತಿ ಉದ್ಭವಿಸಿದೆ.

ಕಳೆದ ವರ್ಷದಿಂದ 455 ದಿನಗಳಿಗೆ ಮಾಡಿದ ಠೇವಣಿಗಳ ಮೇಲಿನ ಬಡ್ಡಿ ದರವನ್ನು 15 ಬೇಸಿನ್ ಪಾಯಿಂಟ್ ಕಡಿಮೆ ಮಾಡಲಾಗಿದೆ. ಅಂದರೆ ಇನ್ನು ಮುಂದೆ ಈ ಸೆಗ್ಮೆಂಟ್ ನಲ್ಲಿ ಶೇ. 6.9 ರಷ್ಟು ಮಾತ್ರ ಬಡ್ಡಿ ದರ ನೀಡುತ್ತಾರೆ. ಬಡ್ಡಿದರಗಳು ಕಡಿಮೆಯಾಗುತ್ತವೆ ಎಂದು ಎಸ್‌ಬಿಐ ಚೇರ್ಮನ್ ಅರುಂಧತಿ ಭಟ್ಟಾಚಾರ್ಯ ಪ್ರಕಡಿಸಿದ ಮಾರನೆಯ ದಿನವೇ ಈ ತೀರ್ಮಾನ ಹೊರಬಿದ್ದಿದೆ.

455 ದಿನಗಳಿಂದ ಎರಡು ವರ್ಷಗಳ ವರೆಗಿನ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಶೇ. 6.5 ಕ್ಕೆ ಇಳಿಸಲಾಗಿದೆ. ಇದುವರೆಗೂ ಇಂತಹ ಠೇವಣಿಗಳಿಗೆ ಶೇ. 7.2 ರಷ್ಟು ಪಾವತಿಸುತ್ತಿದ್ದರು. 2 ರಿಂದ 3 ವರ್ಷಗಳ ಠೇವಣಿಗಳಿಗೆ ಶೇ. 6.85 ರಷ್ಟು ಬಡ್ಡಿ ನೀಡಲಾಗುತ್ತದೆ. ಇದುವರೆಗೂ ಶೇ.7 ರಷ್ಟು ಠೇವಣಿದಾರರಿಗೆ ನೀಡಲಾಗುತ್ತಿತ್ತು. ಸದ್ಯ ಎಸ್‌ಬಿಐ ನಲ್ಲಿ ಒಟ್ಟು ಠೇವಣಿಗಳು 1.12 ಲಕ್ಷ ಕೋಟಿಗೆ ತಲುಪಿದೆ.

ಕೋಟಕ್ ಮಹೀಂದ್ರ ಬ್ಯಾಂಕ್ ಸಹ ಬಡ್ಡಿ ದರಗಳನ್ನು ಕಡಿತಗೊಳಿಸಿದೆ. ವರ್ಷದ ಒಳಗೆ ಹಿಮತೆಗೆಯುವ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಶೇ.7 ಕ್ಕೆ ಇಳಿಸಿದೆ. ಖಾಸಗಿ ಕ್ಷೇತ್ರದ ಅತಿದೊಡ್ಡ ಬ್ಯಾಂಕ್ ಆಕ್ಸಿಸ್ ಬ್ಯಾಂಕ್ ವರ್ಷದ ಅವಧಿಗೆ ನೀಡುವ ಸಾಲಗಳ ಬಡ್ಡಿದರವನ್ನು 25 ಬೇಸಿನ್ ಪಾಯಿಂಟ್ ಕಡಿತಗೊಳಿಸಿದೆ. ಎರಡರಿಂದ ಮೂರು ವರ್ಷಗಳಲ್ಲಿ ವಸೂಲಾಗುವ ಸಾಲಗಳ ಮೇಲಿನ ಬಡ್ಡಿ ದರದಲ್ಲಿ 20 ಬೇಸಿನ್ ಪಾಯಿಂಟ್ ಕಡಿತಗೊಳಿಸಿದೆ.