ಹಳೆ ನೋಟು ಡಿಪಾಸಿಟ್ ಕುರಿತು, ಸುಪ್ರೀಂ ಮಹತ್ವದ ಆದೇಶ – News Mirchi

ಹಳೆ ನೋಟು ಡಿಪಾಸಿಟ್ ಕುರಿತು, ಸುಪ್ರೀಂ ಮಹತ್ವದ ಆದೇಶ

ರದ್ದಾದ ನೋಟುಗಳನ್ನು ಇದುವರೆಗೂ ಬ್ಯಾಂಕುಗಳಲ್ಲಿ ಡಿಪಾಸಿಟ್ ಮಾಡದವರು ಸುಪ್ರೀಂ ತೀರ್ಪಿನಿಂದಾಗಿ ಸ್ವಲ್ಪ ನಿರಾಳರಾಗಿದ್ದಾರೆ. ಹಳೆಯ ನೋಟುಗಳನ್ನು ಬ್ಯಾಂಕುಗಳಿಗೆ ಜಮೆ ಮಾಡುವ ಅವಕಾಶ ಜನರಿಗೆ ಕಲ್ಪಿಸಬೇಕು ಎಂದು ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಸೂಕ್ತ ಕಾರಣಗಳನ್ನು ನೀಡುವವರಿಗೆ ಸಮಸ್ಯೆಯಾಗದಂತೆ, ಪ್ರಾಮಾಣಿಕರು ನಷ್ಟಕ್ಕೊಳಗಾಗದಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ನೋಟು ರದ್ದು ಕ್ರಮ ಕುರಿತಂತೆ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ಸೂಚನೆಗಳನ್ನು ನೀಡಿದೆ. ಅಷ್ಟೇ ಅಲ್ಲದೆ ರದ್ದಾದ ನೋಟುಗಳನ್ನು ಜಮೆ ಮಾಡದವರಿಗಾಗಿ ವಿಶೇಷ ಕೌಂಟರ್ ಗಳನ್ನು ತೆರೆದಿದ್ದೀರಾ ಎಂದು ಕೂಡಾ ಸರ್ಕಾರ ಮತ್ತು ರಿಸರ್ವ್ ಬ್ಯಾಂಕನ್ನು ಪ್ರಶ್ನಿಸಿದೆ. ಆದರೆ ಈ ಕುರಿತು ಪೂರ್ಣ ವಿವರಗಳನ್ನು ಅಫಿಡವಿಟ್ ರೂಪದಲ್ಲಿ ನೀಡುತ್ತೇವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠಕ್ಕೆ ಹೇಳಿದೆ. ಹೀಗಾಗಿ ಮುಂದಿನ ವಿಚಾರಣೆಯನ್ನು ಜುಲೈ 18 ಕ್ಕೆ ಕೈಗೆತ್ತಿಕೊಳ್ಳುವುದಾಗಿ ಕೋರ್ಟ್ ಹೇಳಿದೆ

Loading...