ಪೆರೋಲ್ ವಿಸ್ತರಿಸುತ್ತೇವೆ, 600 ಕೋಟಿ ಕಟ್ಟಿ…

ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ ಪೆರೋಲ್ ಅವಧಿಯನ್ನು ಸುಪ್ರೀಂ ಕೋರ್ಟ್ ಮತ್ತೊಮ್ಮೆ ವಿಸ್ತರಿಸಿದೆ. 2017 ರ ಫೆಬ್ರವರಿ ವರೆಗೂ ಪೆರೋಲ್ ಅವಧಿ ವಿಸ್ತರಿಸುತ್ತಿರುವುದಾಗಿ ಸೋಮವಾರ ಸುಪ್ರೀಂ ಕೋರ್ಟ್ ಹೇಳಿದೆ.

ಜೈಲಿನಿಂದ ಹೊರಗಿರಲು ಫೆಬ್ರವರಿ 6 ರವರೆಗೂ ಅವಕಾಶ ನೀಡುತ್ತಿರುವ ಸುಪ್ರೀಂ, ಇದಕ್ಕಾಗಿ ರೂ. 600 ಕೋಟಿ ಡಿಪಾಸಿಟ್ ಮಾಡುವಂತೆ ಹೇಳಿದೆ. ಒಂದು ವೇಳೆ ಹಣ ಡಿಪಾಸಿಟ್ ಮಾಡಲು ವಿಫಲರಾದರೆ ಶರಣಾಗಬೇಕಿರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದಕ್ಕೂ ಮುನ್ನ ಅಕ್ಟೋಬರ್ 25 ರಂದು ಸುಪ್ರೀಂ ಕೋರ್ಟ್ ಸುಬ್ರತಾ ರಾಯ್ ಪೆರೋಲ್ ಅನ್ನು ನವೆಂಬರ್ 28 ರವರೆಗೂ ವಿಸ್ತರಿಸಿತ್ತು. ಇದಕ್ಕಾಗಿ ಸಹಾರಾ ಗ್ರೂಪ್ 200 ಕೋಟಿ ಡಿಪಾಸಿಟ್ ಮಾಡಿತ್ತು. ನವೆಂಬರ್ ಅಂತ್ಯದೊಳಗೆ ಇನ್ನೂ 200 ಕೋಟಿ ಡಿಪಾಸಿಟ್ ಮಾಡುವುದಾಗಿ ಹೇಳಿತ್ತು.