ತ್ರಿವಳಿ ತಲಾಖ್ ಗೆ 6 ತಿಂಗಳು ಸುಪ್ರೀಂ "ತಲಾಖ್" |News Mirchi

ತ್ರಿವಳಿ ತಲಾಖ್ ಗೆ 6 ತಿಂಗಳು ಸುಪ್ರೀಂ “ತಲಾಖ್”

ಮೂರು ಬಾರಿ ತಲಾಖ್ ಹೇಳುವ ಮೂಲಕ ಮುಸ್ಲಿಂ ಪುರುಷರು ಪತ್ನಿಗೆ ವಿಚ್ಛೇದನ ನೀಡುವ ಪದ್ದತಿಗೆ 6 ತಿಂಗಳ ಕಾಲ ತಡೆ ನೀಡಿರುವ ಸುಪ್ರೀಂ ಕೋರ್ಟ್, ಇದಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ತರುವಂತೆ ಆದೇಶಿಸಿದೆ. 6 ತಿಂಗಳೊಳಗೆ ಸಂಸತ್ತು ಯಾವುದೇ ಕಾನೂನು ರಚಿಸದಿದ್ದರೆ, ತ್ರಿವಳಿ ತಲಾಖ್ ವಿರುದ್ಧದ ತಡೆಯಾಜ್ಞೆ ಮುಂದುವರೆಯುತ್ತದೆ ಎಂದೂ ಇದೇ ವೇಳೆ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ತ್ರಿವಳಿ ತಲಾಖ್ ಮೂಲಕ ಹಲವಾರು ಮುಸ್ಲಿಂ ಮಹಿಳೆಯರು ಅನ್ಯಾಯಕ್ಕೆ ಒಳಗಾಗುತ್ತಿರುವುದು ವರದಿಯಾಗುತ್ತಲೇ ಇವೆ. ಕೆಲವರು ಬಾಯಿಮಾತಿನಲ್ಲಿ ತಲಾಖ್ ಹೇಳಿದರೆ, ಕೆಲವರು ಪತ್ರಗಳ ಮೂಲಕ ವಿಚ್ಛೇದನ ನೀಡುತ್ತಿದ್ದಾರೆ. ಇನ್ನು ಕೆಲವರಂತೂ ತಮ್ಮ ಪತ್ನಿಗೆ ಮೊಬೈಲ್ ನಲ್ಲಿ ತಲಾಖ್ ತಲಾಖ್ ತಲಾಖ್ ಎಂದು ಸಂದೇಶ ಕಳುಹಿಸುವ ಮೂಲಕ ವಿಚ್ಛೇದನ ನೀಡಿದ ಘಟನೆಗಳೂ ಹಲವಾರಿವೆ. ಇತ್ತೀಚೆಗೆ ವಾಟ್ಸಾಪ್ ಮತ್ತು ಸ್ಕೈಪ್ ಮೂಲಕವೂ ವಿಚ್ಛೇದನ ನೀಡಿದ ಘಟನೆಗಳು ವರದಿಯಾಗುತ್ತಿವೆ.

ಇನ್ನು ಆರು ತಿಂಗಳಲ್ಲಿ ತ್ರಿವಳಿ ತಲಾಖ್ ಕುರಿತಂತೆ ಶಾಸನವನ್ನು ರೂಪಿಸುವಂತೆ ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಐವರು ನ್ಯಾಯಾಧೀಶರ ನ್ಯಾಯಪೀಠವು ಕೇಂದ್ರಕ್ಕೆ ಸೂಚಿಸಿದ್ದು, ಈ ವಿಷಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ಒಗ್ಗೂಡಿ ತೀರ್ಮಾನಿಸಲು ಆಗ್ರಹಿಸಿದೆ. ಇಸ್ಲಾಮಿಕ್ ದೇಶಗಳಲ್ಲಿ ನಿಷೇಧಕ್ಕೊಳಗಾಗಿರುವ ತಲಾಖ್ ಪದ್ದತಿಯನ್ನು ಭಾರತದಲ್ಲೇಕೆ ತೊಡೆದು ಹಾಕಲು ಸಾಧ್ಯವಿಲ್ಲ ಎಂದು ಕೋರ್ಟ್ ಪ್ರಶ್ನಿಸಿತು.

ತಲಾಖ್ ಸಿಂಧುತ್ವವನ್ನು ಪ್ರಶ್ನಿಸಿ “ಮುಸ್ಲಿಂ ವುಮೆನ್ಸ್ ಕ್ವೆಸ್ಟ್ ಫಾರ್ ಈಕ್ವಾಲಿಟಿ” ಅರ್ಜಿ ದಾಖಲಿಸಿತ್ತು. ಇದಕ್ಕೆ ಪ್ರತಿಯಾಗಿ ಕರಡು ಮದುವೆ ಒಪ್ಪಂದ(ನಿಖಾನಾಮಾ) ಸಲ್ಲಿಸಿದ್ದ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ, ತಲಾಖ್ ನಿಂದ ಕೆಟ್ಟದ್ದಾಗಿರಬಹುದು, ಆದರೆ ಇದು 1400 ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ದತಿ. ಈ ವಿಷಯದಲ್ಲಿ ಕೋರ್ಟ್ ಮಧ್ಯಪ್ರವೇಶವನ್ನು ನಾವು ಬಯಸುವುದಿಲ್ಲ. ಮೂಲಭೂತ ಹಕ್ಕುಗಳ ಹೆಸರಿನಲ್ಲಿ ಮುಸ್ಲಿಂ ವೈಯುಕ್ತಿಕ ಕಾನೂನುಗಳನ್ನು ಪರೀಕ್ಷಿಸಬಾರದು ಎಂದು ವಾದಿಸಿತ್ತು.

ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ ಪರ ವಾದಿಸಿದ ಕಪಿಲ್ ಸಿಬಲ್, ತಲಾಖ್ ವಿಷಯದಲ್ಲಿ ಕೋರ್ಟ್ ತೆಗೆದುಕೊಳ್ಳುವ ತೀರ್ಮಾನ ಮುಸ್ಲಿಂ ಸಮುದಾಯದ ವಿರೋಧಕ್ಕೆ ಕಾರಣವಾಗಬಹುದು ಎಂದು ನ್ಯಾಯಾಲಯದ ಮುಂದೆ ವಾದಿಸಿದ್ದರು.

Loading...
loading...
error: Content is protected !!